ಹಾಸನ : ಹಾಸನಾಂಬೆ ದರ್ಶನದ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅವಮಾನ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ದೇಗುಲದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಶಾಸಕ ಸ್ವರೂಪ್ ಪ್ರಕಾಶ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ದೇವಸ್ಥಾನದ ಎರಡು ಬದಿಯ ರಸ್ತೆ ಬಂದ್ ಮಾಡಿ ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ದೇವಾಲಯದ ಒಳ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ.
ಈ ವೇಳೆ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದು, ಶಿಷ್ಟಾಚಾರ ವಾಹನದಲ್ಲಿ ಬಂದು ಗಣ್ಯರು ಸಿಲುಕಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರೋಕೆ ಹೇಳಿ ಎಂದು ಎಸಿಗೆ ತಾಕಿತ್ತು ಮಾಡಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೆಡ್ ಗಳನ್ನು ಹೆಚ್ಚಿಸಿದ್ದಾರೆ. ಹಾಸನ ಮಹಾನಗರ ಪಾಲಿಕೆಯ ಮುಂದೆ ಈ ಒಂದು ಪ್ರತಿಭಟನೆ ನಡೆಯುತ್ತಿದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ ಸ್ಥಳಕ್ಕೆ ಎಸಿ ಮಾರುತಿ ಬಂದು ಪ್ರತಿಭಟನಾಕಾರರನ್ನು ಮನವೊಲಿಸುತ್ತಿದ್ದಾರೆ.