ನವದೆಹಲಿ: 2025-26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ತೆರಿಗೆ ನಂತರದ ಏಕೀಕೃತ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 15.9ರಷ್ಟು ಜಿಗಿತವನ್ನು ಕಂಡು, 22,146 ಕೋಟಿಗೆ ತಲುಪಿದೆ.
ಕಾರ್ಯಾಚರಣೆಗಳಿಂದ ಬರುವ ಆದಾಯವು ₹283,548 ಕೋಟಿಗಳಷ್ಟಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ ದಾಖಲಾಗಿದ್ದ ರೂ. 258,027 ಕೋಟಿಗಿಂತ ಶೇ 9.9 ರಷ್ಟು ಹೆಚ್ಚಾಗಿದೆ. 2025ರ ಜೂನ್ ತ್ರೈಮಾಸಿಕದಲ್ಲಿ 273,252 ಕೋಟಿಗಳಷ್ಟು ಇದ್ದದ್ದು ತ್ರೈಮಾಸಿಕದಿಂದ ತ್ರೈಮಾಸಿಕದ ಆಧಾರದಲ್ಲೂ ಹೆಚ್ಚಾಗಿದೆ.
ಜಿಯೋ ಪ್ಲಾಟ್‌ಫಾರ್ಮ್‌ಗಳು
ರಿಲಯನ್ಸ್ ಜಿಯೋ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.6 ರಷ್ಟು ಹೆಚ್ಚಾಗಿ ರೂ. 36,332 ಕೋಟಿಗಳಿಗೆ ತಲುಪಿದೆ. ಇನ್ನು ತೆರಿಗೆ ನಂತರದ ಲಾಭ ವರ್ಷದಿಂದ ವರ್ಷಕ್ಕೆ ಶೇ 12.8ರಷ್ಟು ಏರಿಕೆಯಾಗಿ, ರೂ. 7,379 ಕೋಟಿಗಳಿಗೆ ತಲುಪಿದೆ.
ಕಂಪನಿಯ ಬಹುನಿರೀಕ್ಷಿತ ಐಪಿಒಗಿಂತ ಮುಂಚಿತವಾಗಿ ಜಿಯೋದ ಎರಡನೇ ತ್ರೈಮಾಸಿಕದ ಎಆರ್ ಪಿಯು ರೂ. 211.4ಕ್ಕೆ ಏರಿದೆ, ಗ್ರಾಹಕರ ತೊಡಗಿಸಿಕೊಳ್ಳುವಿಕೆ ಹೆಚ್ಚಿದೆ, ಇದು ಸದ್ಯಕ್ಕೆ 5ಜಿ ಆಫರ್ ಗಳಿಂದ ಪ್ರಭಾವಿತವಾಗಿದೆ.
ರಿಲಯನ್ಸ್ ರೀಟೇಲ್
ರಿಟೇಲ್ ವಿಭಾಗವು ಆದಾಯ ಮತ್ತು ಲಾಭ ಎರಡರಲ್ಲೂ ಆರೋಗ್ಯಕರ ಬೆಳವಣಿಗೆಯನ್ನು ನೀಡಿದ್ದು, ಮಾರ್ಜಿನ್ ಸ್ವಲ್ಪ ಕಡಿಮೆಯಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯವು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಹೆಚ್ಚಾಗಿ ರೂ. 79,128 ಕೋಟಿಗಳಿಗೆ ತಲುಪಿದೆ. ಆದರೆ ತೆರಿಗೆ ನಂತರದ ಲಾಭವು ವರ್ಷದಿಂದ ವರ್ಷಕ್ಕೆ ಶೇ 21.9ರಷ್ಟು ಹೆಚ್ಚಾಗಿ ರೂ. 3,457 ಕೋಟಿಗಳಿಗೆ ತಲುಪಿದೆ. ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 16.5ರಷ್ಟು ಹೆಚ್ಚಾಗಿ ರೂ. 6,816 ಕೋಟಿಗಳಿಗೆ ತಲುಪಿದೆ. ಇಬಿಐಟಿಡಿಎ ಲಾಭವು 20 ಬೇಸಿಸ್ ಪಾಯಿಂಟ್‌ಗಳಿಂದ ಶೇ 8.6 ಕ್ಕೆ ಇಳಿದಿದೆ. ಹಬ್ಬದ ಬೇಡಿಕೆ ಮತ್ತು ಜಿಎಸ್‌ಟಿ ದರ ಕಡಿತವು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ.
ಒ2ಸಿ (ತೈಲದಿಂದ ರಾಸಾಯನಿಕದವರೆಗೆ) ವ್ಯವಹಾರ
ತೈಲದಿಂದ ರಾಸಾಯನಿಕಗಳ (O2C) ಆದಾಯವು ವರ್ಷದಿಂದ ವರ್ಷಕ್ಕೆ ಶೇ 3.2 ರಷ್ಟು ಹೆಚ್ಚಾಗಿ ರೂ. 160,558 ಕೋಟಿಗಳಿಗೆ ತಲುಪಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಘಟಕಗಳಲ್ಲಿ ಹೆಚ್ಚಿನ ಥ್ರೋಪುಟ್ ಇರುವುದರಿಂದ ಮಾರಾಟಕ್ಕೆ ಉದ್ದೇಶಿಸಲಾದ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇ 2.3 ರಷ್ಟು ಹೆಚ್ಚಾಗಿ ರೂ. 15,008 ಕೋಟಿಗಳಿಗೆ ತಲುಪಿದೆ.
ತೈಲ ಮತ್ತು ಅನಿಲ
ಈ ವ್ಯವಹಾರದ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 5.4 ರಷ್ಟು ಕುಸಿದು ರೂ. 5,002 ಕೋಟಿಗಳಿಗೆ ತಲುಪಿದೆ, ಇಬಿಐಟಿಡಿಎ ಮಾರ್ಜಿನ್ 240 ಬೇಸಿಸ್ ಪಾಯಿಂಟ್‌ಗಳಿಂದ ಶೇ 82.6ಕ್ಕೆ ಇಳಿದಿದೆ.
“ರಿಲಯನ್ಸ್ ಎರಡನೇ ತ್ರೈಮಾಸಿಕದಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ನೀಡಿದ್ದು, ಇದು ನಮ್ಮ ಮೂರು ಪ್ರಮುಖ ವ್ಯವಹಾರ ಘಟಕಗಳಾದ ಆಯಿಲ್ ಟು ಕೆಮಿಕಲ್ಸ್, ಜಿಯೋ ಮತ್ತು ರೀಟೇಲ್‌ನ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ. ನಮ್ಮ ಒಟ್ಟು ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 14.6ರಷ್ಟು ಹೆಚ್ಚಾಗಿದೆ, ಇದು ನಮ್ಮ ವ್ಯವಹಾರ ತಂತ್ರದ ಪಾರಮ್ಯ, ದೇಶೀಯ ಮಾರುಕಟ್ಟೆಯ ಮೇಲಿನ ನಮ್ಮ ಗಮನ ಹಾಗೂ ಭಾರತದ ಆರ್ಥಿಕತೆಯಲ್ಲಿ ನಮ್ಮ ನಿರಂತರ ಬಲವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂಬುದಾಗಿ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
“ಈ ತ್ರೈಮಾಸಿಕದಲ್ಲಿ ರಿಲಯನ್ಸ್ ರೀಟೇಲ್ ಬಲವಾದ ಕಾರ್ಯಕ್ಷಮತೆಯನ್ನು ನೀಡಿದೆ. ಇದು ನಮ್ಮ ನಿರಂತರ ಕಾರ್ಯಾಚರಣೆಯ ಸುಧಾರಣೆಗಳು, ಅಂಗಡಿಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಹೂಡಿಕೆಗಳು ಮತ್ತು ಬಲವಾದ ಹಬ್ಬದ ಶಾಪಿಂಗ್‌ನಿಂದಾಗಿ ಆಗಿದೆ. ಜಿಎಸ್‌ಟಿ ದರಗಳಲ್ಲಿನ ಇತ್ತೀಚಿನ ಬದಲಾವಣೆಗಳು ಬಳಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಏಕೆಂದರೆ ಗ್ರಾಹಕರು ಈಗ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಾರೆ ಇಶಾ ಅಂಬಾನಿ ಹೇಳಿದ್ದಾರೆ.
“ಜಿಯೋ ಈಗ 50 ಕೋಟಿಗಿಂತಲೂ ಹೆಚ್ಚು ಗ್ರಾಹಕರನ್ನು ತಲುಪಿದೆ. ಅವರ ದೈನಂದಿನ ಜೀವನದಲ್ಲಿ ಸಹಾಯ ಮಾಡಲು ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ತಾಂತ್ರಿಕ ಕ್ರಾಂತಿಯನ್ನು ವೇಗಗೊಳಿಸಿದ ಮತ್ತು ನಮ್ಮ ಪ್ರಧಾನ ಮಂತ್ರಿಯವರ ‘ಡಿಜಿಟಲ್ ಇಂಡಿಯಾ ಮಿಷನ್’ನ ಬೆನ್ನೆಲುಬಾಗಿ ಮಾರ್ಪಟ್ಟಿರುವ ಜಿಯೋದ ಡೀಪ್-ಟೆಕ್ ಉಪಕ್ರಮಗಳಿಂದ ಇದು ಸಾಧ್ಯವಾಗಿದೆ. ಜಿಯೋ ಹೊಸ ಯುಗದ ತಂತ್ರಜ್ಞಾನಗಳನ್ನು ತರುವುದನ್ನು ಮತ್ತು ಪ್ರತಿ ಭಾರತೀಯ ನಾಗರಿಕನ ಜೀವನವನ್ನು ಸುಧಾರಿಸುವುದನ್ನು ಮುಂದುವರಿಸುತ್ತದೆ. ಮೇಡ್ ಇನ್ ಇಂಡಿಯಾ ತಂತ್ರಜ್ಞಾನವನ್ನು ಜಿಯೋ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದೆ ಮತ್ತು ಈಗ ಈ ತಂತ್ರಜ್ಞಾನವನ್ನು ಜಾಗತಿಕವಾಗಿ ತೆಗೆದುಕೊಂಡು ಹೋಗಲು ತಯಾರಿ ನಡೆಸುತ್ತಿದೆ ಅಂತ ಆಕಾಶ್ ಅಂಬಾನಿ ತಿಳಿಸಿದ್ದಾರೆ.
ಭಾರತೀಯ ಸೈನಿಕರಿಗೆ ದೀಪಾವಳಿ ಉಡುಗೊರೆ: ಗುರೆಜ್‌ನಲ್ಲಿ ಜಿಯೋದಿಂದ ಐದು ಹೊಸ ಟವರ್ ಸ್ಥಾಪನೆ
BIG Alert: ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ, ಮೀರಿದ್ರೆ ಕಾನೂನು ಕ್ರಮ ಫಿಕ್ಸ್