ಕಲಬುರ್ಗಿ : ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಪಟ್ಟಂತೆ ಬಗೆದಷ್ಟು ಕರಾಳತೆ ಬಯಲಾಗುತ್ತಿದೆ. ಇದೀಗ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್ ನಲ್ಲಿ ಮತದಾರರ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಸ್ಐಟಿ ದಾಳಿಯ ವೇಳೆ ಮತದಾರರ ಪಟ್ಟಿ ಪತ್ತೆಯಾಗಿದೆ.
ಇದೀಗ SIT ತನಿಖೆಯಲ್ಲಿ ಸ್ಪೋಟಕ ಅಂಶಗಳು ಬಯಲಾಗಿದ್ದು, ಕಾಲ್ ಸೆಂಟರ್ ಮೂಲಕ ಮತಗಳ್ಳತನ ಮಾಡುತಿದ್ದರು ಎಂಬುದು ಪತ್ತೆಯಾಗಿದೆ. ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಬೆಚ್ಚಿ ಬೀಳಿಸುವ ಅಂಶಗಳು ಪತ್ತೆಯಾಗಿವೆ . ಫಾರ್ಮ್ ನಂಬರ್ 7 ಬಳಕೆ ಮಾಡಿ ವೋಟರ್ ಡಿಲೀಟ್ ಮಾಡುತ್ತಿದ್ದರು. ಅಧಿಕಾರಿಗಳ ದಾಳಿಯ ವೇಳೆ ಕಾಲು ಸೆಂಟರ್‌ನ ಮೂಲ ಪತ್ತೆಯಾಗಿದೆ. ಎಸ್ ಐ ಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಅಕ್ರಮ್, ಅಶ್ಪಾಕ್, ಅಸ್ಲಾಂ ಸೇರಿದಂತೆ ಓಟು 4 ಜನರನ್ನು ಇದಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.
ರೇಡ್ ಆಗುತ್ತೆ ಅಂತ ಗೊತ್ತಾದ ತಕ್ಷಣವೇ ಬಾರ್ ನಲ್ಲಿಯೇ ಮತದಾರರ ಪಟ್ಟಿ ಡಿಲೀಟ್ ಗೆ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೋಟ್ ಚೋರರಿಂದ 7 ಬಾರಿ ಬಾರ್ ನಲ್ಲಿ ಮೀಟಿಂಗ್ ನಡೆಸಲಾಗಿದೆ. ನಿನ್ನೆ ಅಪ್ನಾ ಬಾರ್ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ, ದಾಳಿಯ ವೇಳೆ ಬಾರ್ ನಲ್ಲಿ ವೋಟರ್ ಲಿಸ್ಟ್ ಗಳು ಪತ್ತೆಯಾಗಿವೆ. ಅಲ್ಲದೆ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ್ದ ವಿಚಾರವಾಗಿ ಕೂಡಿಸುವ ಹಣವನ್ನು ಆಳಂದ ಠಾಣೆ ಪೋಲಿಸಿರುವ ಶೆಕೆ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿಯಾಗಿದ್ದಾನೆ. ಆತನ ಹುಡುಕಾಟಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ.