ಮೈಸೂರು : ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಿನ್ನೆಲೆಯಲ್ಲಿ ಅನುಮತಿ ಪಡೆಯದ ಕಾರಣ ಆರ್ ಎಸ್ ಎಸ್ ಬ್ಯಾನರ್ ಮತ್ತು ಭಗವಾಧ್ವಜಗಳನ್ನ ತೆರವುಗೊಳಿಸಲಾಗಿದೆ. ಈ ಕುರಿತು ನಾವು ಆರ್ ಎಸ್ ಎಸ್ ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು ಚಿತ್ತಾಪುರ ಗಲಾಟೆ ಬಗ್ಗೆ ನಾನು ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು ಯಾವುದೇ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಪಡೆಯಬೇಕು. ಇದು 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗಲೆ ಮಾಡಲಾಗಿತ್ತು. ಅದನ್ನ ನಾವು ಈಗ ರಿಪೀಟ್ ಮಾಡಿದ್ದೇವೆ. ಜಗದೀಶ ಶೆಟ್ಟರ್ ಮಾಡಿದಾಗ ಇವರು ಯಾಕೆ ವಿರೋಧ ಮಾಡಲಿಲ್ಲ? ಹಾಗಾಗಿ ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ. ಬಿಜೆಪಿ ಯಾವಾಗಲೂ ರಾಜಕಾರಣನೇ ಮಾಡೋದು ಬಡವರ ಕೆಲಸ ಮಾಡಲ್ಲ ಅವರು ಯಾವಾಗಲೂ ರಾಜಕಾರಣ ಮಾಡುತ್ತಾರೆ ಎಂದರು.