ಬೆಂಗಳೂರು : ಆಳಂದದಲ್ಲಿ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ ವಿಚಾರವಾಗಿ ಬಿಜೆಪಿ ಮೇಲೆ ಮತಗಳ್ಳತನ ಆರೋಪ ಮಾಡಿದ್ದು ಸಾಬೀತಾಗಿದೆ.ಆಳಂದದ ಮಾಜಿ ಶಾಸಕನ ಕೈವಾಡ ಇರುವುದು ಎದ್ದು ಕಾಣುತ್ತಿದೆ. ಲೋಕಸಭೆ ಚುನಾವಣೆಯಲ್ಲೂ ಕೂಡ ಕಳ್ಳತನದಿಂದ ಗೆದ್ದು ಸರ್ಕಾರ ರಚನೆ ಮಾಡಿದ್ದಾರೆ. ಕೇಂದ್ರದಲ್ಲಿ ಅಪವಿತ್ರ ಸರ್ಕಾರ ರಚಿಸಿದ್ದಾರೆ. ರಾಹುಲ್ ಗಾಂಧಿ ಆರೋಪ ನಿಜ ಎಂಬುದು ಸಾಬೀತು ಆಗಿದೆ. ಬಿಜೆಪಿಯವರು ಕಳ್ಳರು ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರದೀಪ ಕಿಡಿ ಕಾರಿದರು.
ಇನ್ನು ಕಲಬುರ್ಗಿ ಜಿಲ್ಲೆಯ ಚಿತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಮತ ಸಂಚಲನ ವಿಚಾರವಾಗಿ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಅಶ್ವಥ ನಾರಾಯಣ, ಸಿಟಿ ರವಿಯವರು ತಮ್ಮ ಮಕ್ಕಳಿಗೂ ಆರ್ ಎಸ್ ಎಸ್ ಗಣ ವೇಷ ಹಾಕಿಸಲಿ. ನಮಾಜ್ ನಿಷೇಧಿಸುವಂತೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ ಯತ್ನಾಳ್ ಸಾಹೇಬರೇ ಬ್ರೈನ್ ತಲೆ ಬುರುಡೆ ಒಳಗೆ ಇರುತ್ತದೆ ನಿಮ್ಮ ಬ್ರೈನ್ ಎಲ್ಲಿದೆ ಅಂತ ನನಗೆ ಡೌಟ್. ಅವರು ಮಸೀದಿ ಆವರಣದಲ್ಲಿ ನಮಾಜ್ ಮಾಡಿಕೊಳ್ಳುತ್ತಾರೆ. ಎಂದು ಬೆಂಗಳೂರಿನಲ್ಲಿ ಶಾಸಕ ಪ್ರತಿಬೀಶ್ವರ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರದೀಪ್ ಈಶ್ವರರನ್ನು ಮುಳ್ಳುಹಂದಿಗೆ ಹೋಲಿಸಿದ ವಿಚಾರವಾಗಿ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಒಂದು ಮುಳ್ಳುಹಂದಿಯ ಬಗ್ಗೆ ಮಾತನಾಡುತ್ತಾರೆ ಅಂದರೆ ಅದು ಇನ್ನೊಂದು ಮುಳ್ಳುಹಂದಿ ಇರಬೇಕು. ಅಪ್ಪನಿಗೆ ಹುಟ್ಟಿದ್ದಾರೆ ಅಂತೆಲ್ಲ ಪ್ರತಾಪ್ ಸಿಂಹ ಹೇಳಿದ್ದಾರೆ ಪ್ರತಾಪ್ ಸಿಂಹ ಅವರೇ ನಮ್ಮಪ್ಪನ ಬಗ್ಗೆ ನನಗೆ ಕ್ಲಾರಿಟಿ ಇದೆ ನಮ್ಮಪ್ಪನ ಬಗ್ಗೆ ನೀನ್ಯಾಕೆ ಯೋಚನೆ ಮಾಡುತ್ತಿದ್ದೀಯಾ?
ನೀನು ನನ್ನ ಆಸ್ತಿಯಲ್ಲಿ ಭಾಗ ಕೇಳಬೇಕೆಂದು ಅಂತಿದ್ದೀಯಾ ಏನು? ಪ್ರತಾಪ್ ಸಿಂಹ ಅವರೇ ನಮ್ಮ ಅಪ್ಪನ ಬಗ್ಗೆ ನನಗೂ ಕ್ಲಾರಿಟಿ ಇದೆ ಗುರು ನೀನು ನಮ್ಮಪ್ಪನ ಬಗ್ಗೆ ಯೋಚನೆ ಮಾಡುತ್ತಿರುವುದು ನೋಡುತ್ತಿದ್ದರೆ ನೀನು ನಮ್ಮ ಆಸ್ತಿಯಲ್ಲಿ ಭಾಗ ಕೇಳುತ್ತಿದೆಯಾ ಅನಿಸುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.