ಬೆಂಗಳೂರು : ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ನಿಗೂಢವಾಗಿ ಸಾವನಪ್ಪಿದ್ದಾನೆ. ಗ್ರಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ತಕ್ಷಿತ್ (20) ಶವವಾಗಿ ಪತ್ತೆಯಾಗಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 8 ದಿನದ ಹಿಂದೆ ಪ್ರೇಯಸಿಯ ಜೊತೆಗೆ ತಕ್ಷಿತ್ ಬೆಂಗಳೂರಿಗೆ ಬಂದಿದ್ದಾರೆ. 8 ದಿನಗಳ ಕಾಲ ಪ್ರೇಮಿಗಳು ಲಾಡ್ಜ್ ನಲ್ಲೆ ವಾಸವಿದ್ದರು.
8 ದಿನಗಳ ಕಾಲ ಊಟ ತಿಂಡಿಯನ್ನು ಪಾರ್ಸೆಲ್ ತರಿಸಿಕೊಂಡಿದ್ದರು. ಊಟ ಸೇವಿಸಿದ ಬಳಿಕ ಇಬ್ಬರಿಗೂ ಫುಡ್ ಪಾಯಿಸನ್ ಆಗಿತ್ತು ಈ ವೇಳೆ ಪ್ರೇಮಿಗಳು ಮೆಡಿಕಲ್ ಹೋಗಿ ಮಾತ್ರೆಗಳನ್ನು ತಂದು ನುಂಗಿದ್ದರು. ಸ್ವಲ್ಪ ಸುಧಾರಿಸಿದ ಬಳಿಕ ಯುವತಿ ಪ್ರಿಯಾಂಕಾ ಲಾಡ್ಜ್ ನಿಂದ ತೆರಳಿದ್ದಾಳೆ. ಆದರೆ ರೂಮ್ನಲ್ಲಿ ಇದ್ದ ತಕ್ಷಿತ್ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.