ಕಲಬುರ್ಗಿ : ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧದ ಕೋರುತ್ತಂತೆ ಪ್ರತಿಭಾ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಸಚಿವ ಸಂಪುಟದಲ್ಲಿ ಆರ್ ಎಸ್ ಎಸ್ ಸೇರಿದಂತೆ ಸಂಘ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು.
ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆಗೆ ಸಡ್ಡು ಹೊಡೆಯಲು ಆರ್ಎಸ್ಎಸ್ ನಾಳೆ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಪಥಸಂಚಲನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರದ ಚಿತ್ತಾಪುದರಲ್ಲಿ ಭಗವಾ ಧ್ವಜಗಳನ್ನು ತೆರವುಗೊಳಿಸಲಾಗಿದೆ. ತಡರಾತ್ರಿ ಪುರಸಭೆ ಅಧಿಕಾರಿಗಳು ಬ್ಯಾನರ್ ಅದೆಲ್ಲವನ್ನು ತೆರವು ಮಾಡಿದ್ದಾರೆ. ಪ್ರವೀಣ್ ಪರವಾನಿಗೆ ಇಲ್ಲದೆ ಅನುಮತಿ ಪಡೆಯದೆ ಭಗವಧ್ವಜ ಬ್ಯಾನರ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರಿಗಳ ಈ ನಡೆಗೆ ಆರ್ ಎಸ್ ಎಸ್ ನ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ.