ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಇರಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬೆನ್ನಲ್ಲೆ, ಇದೀಗ ರಾಜ್ಯ ಸರ್ಕಾರ ಹೊಸ ವಿಧೇಯಕ ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ನಿಷೇಧ ಹೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹೊಸ ವಿಧೇಯಕ ಜಾರಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಕಾನೂನು ಇಲಾಖೆ ವಿಧೇಯಕ ಸಿದ್ದಪಡಿಸಿ ಡ್ರಾಫ್ಟ್ ಮಾಡಿದ್ದು, ಸರ್ಕಾರಿ ಕಟ್ಟಡ, ಆವರಣ, ಆಸ್ತಿಗಳಲ್ಲಿ ಚಟುವಟಿಕೆ ನಿಯಂತ್ರಣ ನಿಯಮ ಸಿದ್ಧವಾಗಿದೆ. ಯಾವುದೇ ಧಾರ್ಮಿಕ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಯಮ ಸಿದ್ಧವಾಗಿದ್ದು, ಜಿಲ್ಲಾಧಿಕಾರಿ ಜಿಲ್ಲಾ ವರಿಷ್ಠಾಧಿಕಾರಿಗೆ ಅನುಮತಿ ನೀಡುವ ಅಧಿಕಾರವಿದೆ.
ನಿಯಮ ಮೀರಿ ಚಟುವಟಿಕೆ ನಡೆಸಿದರೆ 2 ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಮೀರಿದರೆ 3 ವರ್ಷ ಜೈಲು ಶಿಕ್ಷೆ ರೂ. 1, ದಂಡ ವಿಧಿಸಲಾಗುತ್ತದೆ ಇದಕ್ಕೂ ಮೀರಿ ಮುಂದುವರಿದರೆ ನಿತ್ಯ 5 ಸಾವಿರ ತಂಡ ವಿಧಿಸುವ ನಿಯಮ ರೂಪಿಸಲಾಗಿದೆ. ಹೊಸ ಬಿಲ್ ಮೂಲಕ ಆರ್ ಎಸ್ ಎಸ್ ಚಟುವಟಿಕೆಗೆ ಕಡಿವಾಣಕ್ಕೆ ರಾಜ್ಯ ಸರ್ಕಾರ ಇದೀಗ ಮುಂದಾಗಿದೆ