ಮಂಡ್ಯ : ಹಲವಾರು ಬಾರಿ ಸಹಕಾರ ಕೇಳಿದ್ದೇನೆ ಬರಿ ಪತ್ರದ ಮೂಲಕ ಹೇಳ್ತಾರೆ. ದೇಶದಲ್ಲಿ ಎಲೆಕ್ಟ್ರಿಕ್ 10 ಸಾವಿರ ಬಸ್ ಬೆಂಗಳೂರು 4 ಸಾವಿರ ಬಸ್ . ಎಲ್ಲಾ ರೀತಿಯ ಸಹಕಾರ ಕೊಡಲು ನಾನು ತಯಾರಿದ್ದೇನೆ. ರೈತರು ಸಂಕಷ್ಟ ದಲ್ಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಳಿ ಚರ್ಚೆ ಮಾಡಿದ್ದೇನೆ. ಹೆಚ್ಚಿನ ನೆರವಿಗೆ ಮನವಿ ಮಾಡಿದ್ದೇನೆ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ತಿಳಿಸಿದರು.
ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇವತ್ತಿನ ವರೆಗೆ ಪರಿಹಾರ ಕೊಟ್ಟಿದನ್ನ ನೋಡಿಲ್ಲ. ಮಂಡ್ಯದಲ್ಲಿ ಅಭಿವೃದ್ಧಿ ಮಾಡಲು ನಾನು ಬದ್ದ. ರಾಜ್ಯ ಸರ್ಕಾರದ ಹಲವು ಜವಾಬ್ದಾರಿ ಇದೆ. ಮಂಡ್ಯ ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಾನು ದ್ರೋಹ ಮಾಡಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮಂಡ್ಯ ಜನರಿಗೆ ಅಗೌರವ ತರುವ ಬಿಟ್ಟು ಋಣ ತೀರಿಸುತ್ತೇನೆ. ಕೈಗಾರಿಕಾ ಉದ್ಯೋಗ ಆಕರ್ಷಣೆ ಮಾಡಲು ಒತ್ತು. ರಾಜ್ಯದ ಬಗ್ಗೆ ದೇಶದಲ್ಲಿ ಇಲ್ಲಿಯ ಸರ್ಕಾರದ ನಡವಳಿಕೆ ಬಗ್ಗೆ ಪ್ರತಿಕ್ರಿಯೆ ಬರ್ತಿದೆ ನೊಡ್ತಿದ್ದಿರಿ. ಎರಡೂ ಬಾರಿ ಸಿಎಂ ಆದೆ ಒಂದು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಇದ್ದೆ. ಆ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಎರಡನೇ ಬಾರಿ ಕಾಂಗ್ರೆಸ್ ಜೊತೆ ಸಿಎಂ ಆದೆ.
ಬಿಜೆಪಿ ಕೇಂದ್ರದಲ್ಲಿತ್ತು ಅವಾಗ ತೊಂದರೆ ಆಯ್ತು ಎಂದರು.
ಬೆಂಗಳೂರು ನಗರ ಜನಕ್ಕೆ ದೀಪಾವಳಿ ಕೊಡುಗೆ ಕೊಡ್ತಿದ್ದಾರೆ. ಬಿ ಖಾತಾ, ಎಖಾತಾ ಅರ್ಜಿಗೆ 500 . 30/40 ಸೈಟ್ 8 ಲಕ್ಷ ಮಾಡ್ತಿದ್ದಾರೆ.15 ಸಾವಿರ ಕೋಟಿ ವಸೂಲಿ ಮಾಡ್ತಿದ್ದಾರೆ. ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ. ದುಡ್ಡು ಸಂಗ್ರಹ ಮಾಡಲು ಮಾತ್ರ ಚಿಂತನೆ ಮಾಡ್ತಾರೆ. ನಾನು ಇಂಡಸ್ಟ್ರಿ ತರಲು ಆಗುತ್ತಾ? ಎಂದು ಪ್ರಶ್ನಿಸಿದರು.
ಚಲುವರಾಯಸ್ವಾಮಿ ದೊಡ್ಡವರು ಇದ್ದಾರೆ ಬುದ್ದಿವಂತ ಇದ್ದಾರೆ.ನಾವು ಅಷ್ಟು ಬುದ್ದಿವಂತ ಅಲ್ಲ. ರಾಜ್ಯದ ಪರಿಸ್ಥಿತಿ ನೋಡಿದ್ರೆ ಕರಳುಕಿತ್ತು ಬರುತ್ತೆ. ಮಂಡ್ಯದಲ್ಲಿ ಲ್ಯಾಂಡ್ ಇಲ್ಲ, ರಾಜ್ಯ ಸರ್ಕಾರ ಲ್ಯಾಂಡ್ ಕೊಡಬೇಕು. ಕುಮಾರಸ್ವಾಮಿ ಅವರು ಒಬ್ಬರಲ್ಲ 5 ಜನರಿಗೆ ಸಹಕಾರ ಕೊಡ್ತಿಲ್ಲ ಎಂದು ತಿಳಿಸಿದರು.