ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಾನಹಾನಿ ವಿಡಿಯೋ ಪ್ರಸಾರ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಯೂಟ್ಯೂಬರ್ ಸಮೀರ್ ಎಂ.ಡಿ ಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಮಿಲಿಯನ್ ಘಟನೆ ವೀವ್ಸ್ ಪಡೆದಿದ್ದರೆ ಮಾನ ಹಾನಿ ಆಧಾರದ ವಿಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ ನೀಡಿದೆ.
ಹೌದು ಮೂರು ದಿನದೊಳಗೆ ವಿಡಿಯೋ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ ಯೂಟ್ಯೂಬರ್ ಸಮೀರ್, ಅನಂತ್ ಅಂಚನ್ ಮತ್ತು ಶ್ರೀನಾಥ ಶೆಟ್ಟಿ ಸೇರಿದಂತೆ ಗಿರೀಶ್ ಮಟ್ಟಣ್ಣನವರಿಗೆ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಶಾಶ್ವತ ನಿರ್ಬಂಧ ಹೆರಬೇಕು ಎಂದು ಹರ್ಷೇಂದ್ರ ಕುಮಾರ್ ಎನ್ನುವವರು ಮೂಲಧೆ ದಾವೆ ಹೂಡಿದ್ದರು. ಇದೀಗ ಕೋರ್ಟ್ ವಿಡಿಯೋ ಡಿಲೀಟ್ ಮಾಡುವಂತೆ ಎಂ ಡಿ ಸಮೀರ್ ಗೆ ಸೂಚನೆ ನೀಡಿದೆ.