ತುಮಕೂರು : ತುಮಕೂರಿನಲ್ಲಿ ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಭೀಕರವಾದ ಕೊಲೆ ನಡೆದಿದ್ದು, ಜಮೀನು ವಿಚಾರವಾಗಿ ಸಹೋದರರ ನಡುವೆ ಗಲಾಟೆಯಾಗಿದೆ. ಮಚ್ಚು ಹಿಡಿದು ಹೊಡೆದಾಡುವ ದೃಶ್ಯ ಇದೀಗ ವೈರಲ್ ಆಗಿದೆ. ಹೊಡೆದಾಟದಲ್ಲಿ ಶ್ರೀನಿವಾಸ್ ಎನ್ನುವ ವ್ಯಕ್ತಿಯ ಕೊಲೆಯಾಗಿದ್ದು ಗಲಾಟೆ ಸಂಬಂಧಪಟ್ಟಂತೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೊಲೆ ನಡೆಯುವ ಒಂದು ತಿಂಗಳ ಹಿಂದೆ ಕೂಡ ಒಂದು ಗಲಾಟೆ ನಡೆದಿದೆ. ಕೊಲೆಯಾದ ಶ್ರೀನಿವಾಸ್ ಮತ್ತು ಆತನ ಸಹೋದರ ಕೃಷ್ಣಪ್ಪನ ಮಗ L. ಪ್ರಮೋದ್ ನಡುವೆ ಗಲಾಟೆ ಆಗಿದೆ. ಈ ವೇಳೆ ಜೊತೆಯಾದ ಶ್ರೀನಿವಾಸ್ ಮತ್ತು ಸಹೋದರ ಲಕ್ಷ್ಮಣ ಹೊಡೆದಾಟದ ದೃಶ್ಯ ವೈರಲ್ ಆಗಿದೆ. ಅಂದು ಪೊಲೀಸರು ಕೇಸ್ ದಾಖಲಿಸಿಕೊಂಡು ಬಿಟ್ಟು ಕಳಿಸಿದ್ದರು. ಆದರೆ ಇದೀಗ ಶ್ರೀನಿವಾಸ್ ಕೊಲೆಯಾಗಿದೆ.