ಬೆಂಗಳೂರು : ಬೆಂಗಳೂರಿನಲ್ಲಿ ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಚಾಕು ತೋರಿಸಿ ರಸ್ತೆ ಮಧ್ಯೆ ವಿದ್ಯಾರ್ಥಿಗಳು ಪುಂಡಾಟ ಮೆರೆದಿದ್ದಾರೆ. ಆರ್ ಟಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದು ಈಗ ತಡವಾಗಿ ಬೆಳಕಿಗೆ ಬಂದಿದೆ. ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.
ಯುವತಿಗೆ ಇನ್ಸ್ಟಾಗ್ರಾಮ್ ನಲ್ಲಿ ಪ್ರಭು ಎನ್ನುವ ವಿದ್ಯಾರ್ಥಿ ಮೆಸೇಜ್ ಮಾಡಿದ್ದಾನೆ. ಇದನ್ನು ಯುವತಿಯ ಸ್ನೇಹಿತ ಪ್ರಶ್ನೆ ಮಾಡಿದ್ದಾನೆ. ಇದೆ ಸಿಟ್ಟಿನಲ್ಲಿ ಯುವತಿ ಸ್ನೇಹಿತನಿಗೆ ಆರೋಪಿ ಪ್ರಭು ಚಾಕು ಇರದಿದ್ದಾನೆ. ಜೂನಿಯರ್ ಗೆ ಸೀನಿಯರ್ ವಿದ್ಯಾರ್ಥಿ ಪ್ರಭು ಚಾಕು ಇರಿದಿದ್ದಾನೆ ಸ್ನೇಹಿತ ಜೊತೆಗೆ ಬೈಕ್ ನಲ್ಲಿ ಬಂದು ಪ್ರಭು ಚಾಕು ಇರಿದಿದ್ದಾನೆ. ಚಾಕು ಇರಿದು ಪ್ರಭು ಅಟ್ಟಹಾಸ ಮೆರೆದಿದ್ದಾನೆ.
ಯುವತಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದನ್ನು ಸ್ನೇಹಿತ ಪ್ರಶ್ನಿಸಿದ್ದಾನೆ ಒಂದೇ ಕ್ಲಾಸ್ನಲ್ಲಿ ಸ್ನೇಹಿತ ಮತ್ತು ಯುವತಿ ಕಲಿಯುತ್ತಿದ್ದಾರೆ. ಯುವತಿಗೆ ನಿರಂತರವಾಗಿ ಆರೋಪಿ ಪ್ರಭು ಮೆಸೇಜ್ ಮಾಡುತ್ತಿದ್ದ ಕಾಟ ಕೊಡುತ್ತಿದ್ದ. ಇದನ್ನು ಯುವತಿಯ ಸ್ನೇಹಿತ ಪ್ರಶ್ನೆ ಮಾಡಿದ್ದಾನೆ. ಇದೇ ಸಿಟ್ಟನ್ನು ಇಟ್ಟುಕೊಂಡ ಪ್ರಭು ಬೈಕ್ ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು FIR ದಾಖಲಾಗಿದೆ.