ಹಾಸನ : ಹಾಸನಾಂಬ ದೇವಾಲಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದು ನಿನ್ನೆ ಅಷ್ಟೇ ಡಿಕೆ ಶಿವಕುಮಾರ್ ಹಾಸನಾಂಬೆಗೆ ಪೂಜೆ ಪುನಸ್ಕಾರ ಸಲ್ಲಿಸಿದರು. ಹಾಸನ ಬಗ್ಗೆ ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದು ದೇವರಿಗೂ ಭಕ್ತನಿಗೂ ವ್ಯವಹಾರ ನಡೆಯುವ ಸ್ಥಳ ಅಂದರೆ ದೇವಾಲಯ ಸಿಎಂ ಸ್ಥಾನ ಸಿಗುವ ವಿಚಾರ ನನಗೆ ಮತ್ತು ಭಗವಂತನಿಗೆ ಮಾತ್ರ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ನಿನ್ನೆ ಶ್ರೀ ಹಾಸನಾಂಬ ದೇವಾಲಯಕ್ಕೆ ಕುಟುಂಬಸಮೇತ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರ್ಗಿಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ ದರ್ಶನ ಭಾಗ್ಯ ನಮ್ಮಲ್ಲರಿಗೂ ಸಿಕ್ಕಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆಯಾಗಿದ್ದು, ಭಕ್ತರ ದುಃಖವನ್ನು ಪರಿಹರಿಸುತ್ತಾಳೆ ಎಂದರು.
ಭಕ್ತರು ತಮಗೆ ನೆಮ್ಮದಿ, ಶಾಂತಿಯ ಬದುಕನ್ನು ಕೊಡು ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಎಲ್ಲ ಜನರು ವಿಶೇಷವಾದ ದರ್ಶನ ಪಡೆಯುತ್ತಿದ್ದಾರೆ. ನಾನು ಪ್ರತೀ ವರ್ಷವೂ ದೇವಿಯ ದರ್ಶನ ಪಡೆಯಲು ಬರುತ್ತಿದ್ದೇನೆ. ಅಂತೆಯೇ ಇಂದು ನಾನು, ನನ್ನ ಪತ್ನಿಯ ಕುಟುಂಬಸ್ಥರು ದೇವಿಯ ದರ್ಶನ ಪಡೆದಿದ್ದೇವೆ ಎಂದು ಹೇಳಿದರು.
ಈ ವೇಳೆ ಪತ್ರಕರ್ತರು ಹೆಚ್ಚಿನ ಅಧಿಕಾರಕ್ಕೆ ಏನಾದರು ಬೇಡಿಕೊಂಡ್ರ ಅಂತ ಕೇಳಿದಾಗ ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವಂತಹ ಸ್ಥಳ ದೇವಾಲಯ. ಹಾಗಾಗಿ ನಾನುಂಟು ಆ ತಾಯಿ ಉಂಟು, ನಾನಂತೂ ಭಕ್ತರ ಉಂಟು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದರು.