ಶಿವಮೊಗ್ಗ: ಇಂದು ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ದುರ್ಘಟನೆಗಳು ಸಂಭವಿಸಿವೆ. ಟ್ರ್ಯಾಕ್ಟರ್ ಟ್ರಿಲ್ಲರ್ ಹೊಡೆಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದರೇ, ಬೈಕ್-ಬೈಕ್ ಗಳ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿಯ ಕಾಲು ಕಟ್ ಅಗಿರುವಂತ ದುರ್ಘಟನೆ ನಡೆದಿದೆ.
ವಿದ್ಯುತ್ ಶಾಕ್ ನಿಂದ ಯುವಕನಿಗೆ ಗಂಭೀರ ಗಾಯ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಬೆಳೆದಿದ್ದ ಗಿಡಗೆಂಟೆ, ಹುಲ್ಲು ಕ್ಲೀನ್ ಮಾಡಲು ಟ್ರ್ಯಾಕ್ಟರ್ ಹೊಡೆಯುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಪತ್ರೆಸಾಲಿನ ಅರುಣ್ ಕುಮಾರ್(31) ಗಂಭೀರವಾಗಿ ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ಗೆ ವಿದ್ಯುತ್ ಕಂಬದ ಸಮೀಪದಲ್ಲಿ ತುಂಡಾಗಿದ್ದಂತ ಗೈಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಾಹನದಿಂದ ಕೆಳಗೆ ಹಾರುವ ವೇಳೆಗೆ ವಿದ್ಯುತ್ ಶಾಕ್ ನಿಂದ ಅರುಣ್ ಕುಮಾರ್ ಕಾಲು, ಕೈ, ಎದೆಯ ಭಾಗವು ಸುಟ್ಟು ಹೋಗಿವೆ.
ವಿದ್ಯುತ್ ಶಾಕ್ ಗೆ ಒಳಗಾದಂತ ಪತ್ರೆಸಾಲಿನ ಅರುಣ್ ಕುಮಾರ್(31) ಗೆ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ಉಳವಿಯಲ್ಲಿ ಬೈಕ್ ಬೈಕ್ ನಡುವೆ ಅಪಘಾತ: ಕಾನಹಳ್ಳಿ ವ್ಯಕ್ತಿ ಕಾಲು ಕಟ್
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಗ್ರಾಮ ಪಂಚಾಯ್ತಿ ಸಮೀಪದ ಗೊಬ್ಬರದ ಅಂಗಡಿ ಬಳಿಯಲ್ಲಿ ಬೈಕ್ ಹಾಗೂ ಮತ್ತೊಂದು ಬೈಕ್ ನಡುವೆ ಅಪಘಾತ ಸಂಭವಿಸಿ ಕಾನಹಳ್ಳಿಯ ವ್ಯಕ್ತಿಯೊಬ್ಬರ ಕಾಲು ಕಟ್ ಆಗಿದೆ.
ಉಳವಿಯ ಗೊಬ್ಬರದ ಅಂಗಡಿಯ ಕಡೆಗೆ ಕಾನಹಳ್ಳಿಯ ಹಳ್ಳೂರು ಚಂದ್ರು(35) ತಿರುವು ಪಡೆಯುತ್ತಿದ್ದಾಗ, ಸೊರಬದ ಕಣ್ಣೂರು ಕಡೆಯಿಂದ ಬರುತ್ತಿದ್ದ ಬೈಕ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಕಾನಹಳ್ಳಿಯ ಬೈಕ್ ಚಾಲಕ ಹಳ್ಳೂರು ಚಂದ್ರು(35) ಬಲಗಾಲು ಕಟ್ ಆಗಿದೆ.
ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಾಗರಕ್ಕೆ ಕರೆದೊಯ್ಯಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
Good News ; ‘RBI’ನಿಂದ ‘e₹’ ಅನಾವರಣ ; ಈಗ ಇಂಟರ್ನೆಟ್ ಅಗತ್ಯವಿಲ್ಲ, ಒಂದೇ ಕ್ಲಿಕ್’ನಲ್ಲಿ ‘ಪಾವತಿ’
ಬೆಂಗಳೂರು-ಗದಗಕ್ಕೆ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್’ ಸಂಚಾರ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ








