ಬೆಂಗಳೂರು: ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಅವರು ಆರೋಪಿಸಿದರು.
ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್‍ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದರು.
ಇದು ಅವರ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಕಿರಣ್ ಮಜುಂದಾರ್ ಅವರು ಟ್ವೀಟ್ ಮಾಡಿದ್ದಾರೆ. ಚೀನಾದ ಕಂಪೆನಿಯು ರಸ್ತೆಯ ಪರಿಸ್ಥಿತಿ ಕೆಟ್ಟದಾಗಿ ಇರುವ ಕುರಿತು ಕಸದ ರಾಶಿ ಬಗ್ಗೆ ತಿಳಿಸಿ, ಹೂಡಿಕೆ ಬೇಡವೇ ಎಂದು ಕೇಳಿದೆ ಎಂದು ಪ್ರಸ್ತಾಪಿಸಿದ್ದಾರೆ ಎಂದು ಗಮನಕ್ಕೆ ತಂದರು. ಇದು ಅವರ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಎಂದು ಕೇಳಿದರು. ಮೋಹನ್‍ದಾಸ್ ಪೈ ಅವರು ಲಂಚಗುಳಿತನದ ಕುರಿತು ಪ್ರಸ್ತಾಪಿಸಿದ್ದರು ಎಂದು ವಿವರಿಸಿದರು. ಬ್ಲಾಕ್ ಬಗ್ಸ್ ಇಷ್ಟವಿದ್ದರೆ ಇರಲಿ; ಇಲ್ಲವಾದರೆ ಔಟ್ ಎಂದು ಅಶ್ವತ್ಥನಾರಾಯಣ್ ಫ್ರೆಂಡ್ ಹೇಳಿದ್ದರು. ಅದಕ್ಕೆ ಅವರನ್ನು ಮೆಚ್ಚಬೇಕು ಎಂದು ವ್ಯಂಗ್ಯವಾಡಿದರು.
ಆರೆಸ್ಸೆಸ್ ಚಟುವಟಿಕೆ ನಿಷೇಧ ಕುರಿತ ಪ್ರಿಯಾಂಕ್ ಅವರ ಪತ್ರದ ಕುರಿತು ಪತ್ರಕರ್ತರು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಯಾಕೆ ಹೋದರೆಂದು ಪ್ರಿಯಾಂಕ್ ಅವರು, ಅವರ ಅಪ್ಪನನ್ನು ಕೇಳಲಿ ಎಂದು ಸವಾಲು ಹಾಕಿದರು.
ಕ್ರಾಂತಿ ಈಗ ಚಾಲನೆಗೆ ಬಂದಿದೆ; ಇದು ಬಿದ್ದುಹೋಗುವ ಸರಕಾರ
ಕ್ರಾಂತಿ ಈಗ ಚಾಲನೆಗೆ ಬಂದಿದೆ; ಇದು ಬಿದ್ದುಹೋಗುವ ಸರಕಾರ; ಸಿದ್ದರಾಮಯ್ಯ- ಶಿವಕುಮಾರ್ ಅವರದು ಕ್ರಾಂತಿ ಭ್ರಾಂತಿಗೆ ಸಂಬಂಧಿಸಿ ಒಂದೇ ರೀತಿ ಹೇಳಿಕೆ ಇರಬೇಕಲ್ಲವೇ ಎಂದು ಅವರು ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು. ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಎಂದು ಶಿವಕುಮಾರ್ ಹೇಳಿದರೆ, ಸಿದ್ದರಾಮಯ್ಯ ಎಂಎಲ್‍ಎಗಳು ಎನ್ನುತ್ತಾರೆ ಎಂದು ಗಮನ ಸೆಳೆದರು. ಎಂಎಲ್‍ಎಗಳೇ ಮುಖ್ಯಮಂತ್ರಿ ಮಾಡುವುದಾಗಿದ್ದರೆ ರಾಜೀವ್ ಗಾಂಧಿ ಬಂದು ವಿಮಾನನಿಲ್ದಾಣದಲ್ಲೇ ವೀರೇಂದ್ರ ಪಾಟೀಲರನ್ನು ಡಮಾರ್ (ವಜಾ) ಎನಿಸಿ ಹೋದರಲ್ಲವೇ? ಆಗ ಶಾಸಕರ ಸಭೆ ಕರೆದಿದ್ದರೇ ಸಿದ್ದರಾಮಯ್ಯನವರೇ ಎಂದು ಕೇಳಿದರು.
ಮಾಲೂರಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲಿ; ಮತಗಳ್ಳರು ಯಾರೆಂದು ಗೊತ್ತಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ ಎಂದರೆ ಅದು ವಂಶವೃಕ್ಷದ ಪಕ್ಷ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.
ಕರ್ನಾಟಕದ ‘ಲಕ್ಕುಂಡಿ’ಗೆ ‘UNESCO ಸ್ಥಾನಮಾನ’: ಸಚಿವ ಹೆಚ್.ಕೆ ಪಾಟೀಲ್