ನವದೆಹಲಿ : ತಮ್ಮ ಆಸ್ತಿಗಳಿಂದ ವಸೂಲಿ ಮಾಡಲಾದ ಹಣದ ವಿವರಗಳನ್ನು ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ತಡೆಹಿಡಿದಿವೆ ಎಂದು ಆರೋಪಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಮಂಗಳವಾರ ಟೀಕಿಸಿದ್ದಾರೆ , ವಸೂಲಿ ಮಾಡಿದ ಹಣದ ಅಧಿಕೃತ ದೃಢೀಕರಣದ ಹೊರತಾಗಿಯೂ ಪೂರ್ಣ ಖಾತೆಯನ್ನು ಪ್ರಸ್ತುತಪಡಿಸದಿದ್ದಕ್ಕಾಗಿ ಅವರು ನಾಚಿಕೆಪಡಬೇಕು ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮೂಲಕ ಕಿಡಿ ಕಾರಿರುವ ಅವರು, ನನ್ನಿಂದ ಗ್ಯಾರಂಟರ್ ಆಗಿ ಹಣವನ್ನು ಪಡೆಯುತ್ತಿರುವ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು, ಕೇಂದ್ರ ಹಣಕಾಸು ಸಚಿವರು 14,100 ಕೋಟಿ ರೂ.ಗಳನ್ನು ಅದೇ ಬ್ಯಾಂಕುಗಳಿಗೆ ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರೂ, ವಸೂಲಾತಿಯ ಖಾತೆಯ ನಿಖರವಾದ ಹೇಳಿಕೆಯನ್ನು ಇನ್ನೂ ಸಲ್ಲಿಸದಿದ್ದಕ್ಕೆ ನಾಚಿಕೆಪಡಬೇಕು ಎಂದು ಬರೆದಿದ್ದಾರೆ.
The Indian Public Sector Banks who claim monies from me as a guarantor should be ashamed that they have not yet submitted an accurate statement of account of recoveries made despite the Union Finance Minister clearly stating that Rs 14,100 crores have been restored to the very…
— Vijay Mallya (@TheVijayMallya) October 13, 2025