Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಧಿವೇಶನದಲ್ಲಿ ‘ಇ-ವಿಧಾನ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ : ಸ್ಪೀಕರ್ ಯು.ಟಿ. ಖಾದರ್​​ ಘೋಷಣೆ

03/04/2026 4:02 PM

BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

03/04/2026 3:56 PM

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿ, ನವವಿವಾಹಿತೆ ಸಾವು, ಪತಿಗೆ ಗಂಭೀರ ಗಾಯ!

03/04/2026 3:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಕಲ್ಯಾಣ ಮಂಟಪ, ಶಾದಿ ಮಹಲ್ ಗಳಲ್ಲಿ `ಬಾಲ್ಯವಿವಾಹ ನಿಷೇಧ’ ಕುರಿತ ಗೋಡೆಬರಹ ಕಡ್ಡಾಯ.!
KARNATAKA

ರಾಜ್ಯದ ಕಲ್ಯಾಣ ಮಂಟಪ, ಶಾದಿ ಮಹಲ್ ಗಳಲ್ಲಿ `ಬಾಲ್ಯವಿವಾಹ ನಿಷೇಧ’ ಕುರಿತ ಗೋಡೆಬರಹ ಕಡ್ಡಾಯ.!

By kannadanewsnow5714/10/2025 6:09 AM

ಬಾಲ್ಯ ವಿವಾಹ ಮುಕ್ತವಾಗಿಸುವ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಲ್ಯವಿವಾಹ ನಿಷೇಧ ಕಾನೂನು, ಅಪರಾಧಕ್ಕಿರುವ ಶಿಕ್ಷೆ ಪ್ರಮಾಣ ಮುಂತಾದವುಗಳ ಕುರಿತು ವಿವಾಹಗಳು ನಡೆಯುವ ದೇವಸ್ಥಾನ, ಶಾದಿಮಹಲ್, ಕಲ್ಯಾಣ ಮಂಟಪ ಹಾಗೂ ಫಂಕ್ಷನ್ ಹಾಲ್ಗಳಲ್ಲಿ ಶಾಶ್ವತ ಫಲಕ ಹಾಗೂ ಗೋಡೆಬರಹವನ್ನು ಕಡ್ಡಾಯವಾಗಿ ಬರೆಯಿಸಿ, ಪ್ರದರ್ಶಿಸಬೇಕು.

ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಕರ್ನಾಟಕ ತಿದ್ದುಪಡಿ ಕಾಯ್ದೆ-2016 ರನ್ವಯ 18 ವರ್ಷದೊಳಗಿನ ಹೆಣ್ಣು ಮಕ್ಕಳ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಕಾಯ್ದೆಯ ಕಲಂ 9 ರನ್ವಯ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗುವನ್ನು ವಿವಾಹ ಮಾಡಿಕೊಂಡ ಪುರುಷ, ಕಲಂ 10 ಮತ್ತು 11 ರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹವನ್ನು ಆಯೋಜಿಸಿದವರು, ಆಯೋಜಿಸಲು ಉತ್ತೇಜನ ಅಥವಾ ಪ್ರೋತ್ಸಾಹ ನೀಡುವವರು ಮತ್ತು ಬಾಲ್ಯವಿವಾಹದಲ್ಲಿ ಭಾಗವಹಿಸುವವರಿಗೆ 1 ವರ್ಷದಿಂದ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷಗಳ ದಂಡ ವಿಧಿಸಬಹುದಾಗಿರುತ್ತದೆ.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಅತ್ಯಗತ್ಯವಾಗಿದ್ದು, ಕಾಯ್ದೆಯ ಕುರಿತು ಸಮುದಾಯಗಳಲ್ಲಿ ಮತ್ತಷ್ಟು ಜಾಗೃತಿಯನ್ನು ಮೂಡಿಸುವಂತೆ ನಿರ್ದೇಶಿಸಿದೆ. ಆದ್ದರಿಂದ ವಿವಾಹ ಆಯೋಜಕರು, ದೇವಸ್ಥಾನ, ಶಾದಿ ಮಹಲ್ಗಳ, ಉಸ್ತುವಾರಿ ಸದಸ್ಯರು, ಕಲ್ಯಾಣ ಮಂಟಪ ಮತ್ತು ಫಂಕ್ಷನ್ ಹಾಲ್ಗಳ ವ್ಯವಸ್ಥಾಪಕರುಗಳಿಗೆ ಅವರುಗಳ ವ್ಯಾಪ್ತಿಯಲ್ಲಿ ಆಯೋಜಿಸುವ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹಗಳಲ್ಲಿ ಅಥವಾ ಅಧೀನದಲ್ಲಿರುವ ಸ್ಥಳದಲ್ಲಿ ಬಾಲ್ಯವಿವಾಹ ಜರುಗದಂತೆ ಸೂಕ್ತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬಾಲ್ಯವಿವಾಹ ನಡೆದಲ್ಲಿ, ಅಂತವರನ್ನು ಹಾಗೂ ಸರಕು ಮತ್ತು ಸೇವೆಗಳನ್ನು ಒದಗಿಸಿದವರನ್ನೂ ಸಹ ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗುವುದಾಗಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wall writings on 'ban on child marriage' are mandatory in the state's welfare centres and wedding halls!
Share. Facebook Twitter LinkedIn WhatsApp Email

Related Posts

BREAKING : ಅಧಿವೇಶನದಲ್ಲಿ ‘ಇ-ವಿಧಾನ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ : ಸ್ಪೀಕರ್ ಯು.ಟಿ. ಖಾದರ್​​ ಘೋಷಣೆ

03/04/2026 4:02 PM2 Mins Read

BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

03/04/2026 3:56 PM1 Min Read

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿ, ನವವಿವಾಹಿತೆ ಸಾವು, ಪತಿಗೆ ಗಂಭೀರ ಗಾಯ!

03/04/2026 3:46 PM1 Min Read
Recent News

BREAKING : ಅಧಿವೇಶನದಲ್ಲಿ ‘ಇ-ವಿಧಾನ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ : ಸ್ಪೀಕರ್ ಯು.ಟಿ. ಖಾದರ್​​ ಘೋಷಣೆ

03/04/2026 4:02 PM

BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

03/04/2026 3:56 PM

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿ, ನವವಿವಾಹಿತೆ ಸಾವು, ಪತಿಗೆ ಗಂಭೀರ ಗಾಯ!

03/04/2026 3:46 PM

ಸಾಗರದ ಹೆಬ್ಬರಿಗೆ ಶಾಲೆಗೆ ವಜ್ರ ಮಹೋತ್ಸವ ಸಂಭ್ರಮ: ಗ್ರಾಮೀಣ ಶಿಕ್ಷಣದ ಹೆಮ್ಮೆಯ ಪಯಣ- ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್

03/04/2026 3:43 PM
State News
KARNATAKA

BREAKING : ಅಧಿವೇಶನದಲ್ಲಿ ‘ಇ-ವಿಧಾನ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ : ಸ್ಪೀಕರ್ ಯು.ಟಿ. ಖಾದರ್​​ ಘೋಷಣೆ

By kannadanewsnow0503/04/2026 4:02 PM KARNATAKA 2 Mins Read

ಬೆಂಗಳೂರು : ಬಹುನಿರೀಕ್ಷಿತ ಕಾಗದ ರಹಿತ ವಿಧಾನಮಂಡಲ ಅಧಿವೇಶನ ನಡೆಸುವಾಗಿನ ಇ-ವಿಧಾನ ಯೋಜನೆಯ ಜಾರಿಗೆ ಮೂಹೂರ್ತ ಕೂಡಿ ಬಂದಿದೆ. ದಶಕದಿಂದ…

BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

03/04/2026 3:56 PM

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿ, ನವವಿವಾಹಿತೆ ಸಾವು, ಪತಿಗೆ ಗಂಭೀರ ಗಾಯ!

03/04/2026 3:46 PM

ಸಾಗರದ ಹೆಬ್ಬರಿಗೆ ಶಾಲೆಗೆ ವಜ್ರ ಮಹೋತ್ಸವ ಸಂಭ್ರಮ: ಗ್ರಾಮೀಣ ಶಿಕ್ಷಣದ ಹೆಮ್ಮೆಯ ಪಯಣ- ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್

03/04/2026 3:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.