ಮಂಡ್ಯ : ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಡಿಕೆ ಶಿವಕುಮಾರರನ್ನು ಬಿಜೆಪಿಗೆ ಕರೆತರಲು ಪ್ಲಾನ್ ಮಾಡಿದ್ದು ನಿಜ ಎಂದು ಮಂಡ್ಯದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತ್ತಿರುವ ಪ್ಲಾನ್ ನಡೆದಿತ್ತು ಉದ್ಘಾಟನೆ ಆದ ದಿನವೇ ರಾಷ್ಟ್ರೀಯ ನಾಯಕರು ಒಬ್ಬರು ಕರೆ ಮಾಡಿದರು ಡಿಕೆಸಿಎಂ ಹಾಗೂ ಬಿ ವೈ ವಿಜೇಂದ್ರ ಡಿಸಿಎಂ ಆಗುವ ಪ್ಲಾನ್ ನಡೆಯುತ್ತಿದೆ ಎಂದಿದ್ದರು. ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ 90 ಶಾಸಕರನ್ನು ಕರೆತರುತ್ತಾರೆ ಅಂದುಕೊಂಡಿದ್ದರು.
ಆದರೆ 15 ಶಾಸಕರಷ್ಟೇ ಡಿಕೆ ಶಿವಕುಮಾರ್ ಅವರ ಪರವಾಗಿ 15 ಶಾಸಕರಷ್ಟೇ ಅಂತ ಗೊತ್ತಾದ ಮೇಲೆ ಪ್ಲಾನ್ ಕೈ ಬಿಟ್ಟರು.ಈ ಹಿಂದೆ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತರಲು ಪ್ಲಾನ್ ಮಾಡಿದ್ದು ನಿಜ ಇದನ್ನು ನಾನು ವಿರೋಧಿಸುತ್ತೇನೆ ಎಂದು ನನ್ನನ್ನು ಬಿಜೆಪಿಯಿಂದ ಉಚ್ಛಾಟಿಸಿದ್ದಾರೆ ಎಂದು ಮಂಡ್ಯದಲ್ಲಿ ಶಾಸಕ ಬಸನಗೌಡ ಪಾಟೀಲ ಸ್ಫೋಟಕವಾದ ಹೇಳಿಕೆ ನೀಡಿದರು.