ಮಂಡ್ಯ : ರೋಲ್ ಕಾಲ್ ಮಾಡುವ ಬ್ರಹ್ಮಾಂಡ ಗುರೂಜಿಯಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗಲ್ಲ. ಈ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ನಾಡಿನ ಜನರು ತೀರ್ಮಾನ ಮಾಡ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಬ್ರಹ್ಮಾಂಡ ಗುರೂಜಿ ವಿರುದ್ದ ಹರಿಹಾಯ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಇದೇ ಕೊನೆ. ಮತ್ತೆಂದು ಅಧಿಕಾರಕ್ಕೆ ಬರೋದಿಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಒಬ್ಬ ಸನ್ಯಾಸಿಗೆ ಪ್ರಧಾನಿಯಾಗುವ ಯೋಗವಿದೆ ಎಂದು ಬ್ರಹ್ಮಾಂಡ ಗುರೂಜಿ ಶುಕ್ರವಾರ ಭವಿಷ್ಯ ನುಡಿದಿದ್ದರು.
ಈ ಹೇಳಿಕೆ ಕುರಿತು ಮದ್ದೂರಿನಲ್ಲಿ ಶನಿವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್, ಕಾಂಗ್ರೆಸ್ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿದೆ. ಅದನ್ನು ನೋಡಿ ಜನರು ಆಶೀರ್ವಾದ ಮಾಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸಹ ಪಕ್ಷಕ್ಕೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ಧೃಡ ಸಂಕಲ್ಪವಿದೆ. ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯದ ಜನತೆ ನಿರ್ಧರಿಸುತ್ತಾರೆ ಎಂದು ಕಿಡಿಕಾರಿದರು.
ಈ ರೋಲ್ ಕಾಲ್ ಬ್ರಹ್ಮಾಂಡ ಗುರೂಜಿಯ ಹಿನ್ನೆಲೆ ಏನಂತ ನನಗೆ ಸಂಪೂರ್ಣ ಗೊತ್ತಿದೆ. ಕೇವಲ ಟಿವಿ ಮುಂದೆ ಕುಳಿತುಕೊಂಡು ಬುರುಡೆ ಜ್ಯೋತಿಷ್ಯ ಹೇಳಿಕೊಂಡು ಜನರಿಗೆ ಮಂಕು ಬೂದಿ ಎರಚಿ ಯಾಮಾರಿಸಿಕೊಂಡು ರೋಲ್ ಕಾಲ್ ಮೂಲಕ ಬದುಕು ನಡೆಸುತ್ತಿರುವ ಈತನಿಗೆ ದೇಶದ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷದ ಭವಿಷ್ಯ ಹೇಳುವ ನೈತಿಕ ಹಕ್ಕಿಲ್ಲ. ಇಂತಹ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಶಾಸಕ ಉದಯ್ ಬ್ರಹ್ಮಾಂಡ ಗುರೂಜಿಯನ್ನು ನೇರವಾಗಿ ಜಾಡಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ: ನೆರೆ ಹಾವಳಿ ಪ್ರದೇಶಗಳಿಗೆ ಶಾಸಕ ಕೆ.ಎಂ.ಉದಯ್ ಭೇಟಿ, ಪರಿಶೀಲನೆ
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ