ಮಂಗಳೂರು: ಮಂಗಳೂರಲ್ಲಿ ಖ್ಯಾತ ಮಲಯಾಳಂ ನಟ ಜಯಕೃಷ್ಣನ್ ನನ್ನು ಉರ್ವಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಲಯಾಳಂ ನಟ ಜಯಕೃಷ್ಣನ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕ್ಯಾಬ್ ಚಾಲಕನನ್ನು ಟೆರೆರಿಸ್ಟ್ ಎಂಬುದಾಗಿ ಬೈದಿದ್ದಕ್ಕೆ ನಟ ಜಯಕೃಷ್ಣನ್ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ಸೆಪ್ಟೆಂಬರ್ 9ರಂದು ಆಪ್ ಮೂಲಕ ಶಫೀಕ್ ಅಹ್ಮದ್ ಅವರ ಕ್ಯಾಬ್ ಅನ್ನು ನಟ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಬುಕ್ ಮಾಡಿದ್ದರು. ಮುಸ್ಲೀಂ ತೀವ್ರವಾದಿ, ಟೆರರಿಸ್ಟ್ ಎಂದು ಅಪಹಾಸ್ಯ ಮಾಡಿದ್ದರು. ಹಿಂದಿ, ಮಲಯಾಳಂ ಭಾಷೆಯಲ್ಲಿ ಅಪಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಕ್ಯಾಬ್ ಚಾಲಕ ನೀಡಿದ್ದಂತ ದೂರು ಆಧರಿಸಿ ಬಿಎನ್ ಎಸ್ ಕಾಯ್ದೆ. ಕಲಂ 352, 352(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.