ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತದಿಂದ ಬಿಎಂಟಿಸಿ ಬಸ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರಿನ ದೇವನಹಳ್ಳಿ 50 ನೇ ಬಸ್ ಡಿಪೋದಲ್ಲಿ ಹೃದಯಾಘಾತದಿಂದ ಬಿಎಂಟಿಸಿ ಬಸ್ ಚಾಲಕ ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ನಾರಾಯಣಪ್ಪ ರಾತ್ರಿ ಕೆಲಸ ಮುಗಿಸಿ ಬಸ್ ಸಮೇತ ಡಿಪೋಗೆ ಬಂದಿದ್ದರು.
ನಾರಾಯಣಪ್ಪ ಬಸ್ ನಿಲ್ಲಿಸುತ್ತಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಪರಿಣಾಮ ಸ್ಟೇರಿಂಗ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಾರಾಯಣಪ್ಪ ಮೃತಪಟ್ಟಿದ್ದಾರೆ .ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.