ಬೆಂಗಳೂರು : ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ. ಮೇಘರಾಜ್ (31) ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದು ರಾಜರಾಜೇಶ್ವರಿ ನಗರದಲ್ಲಿರುವ 1522 ಪಬ್ನಲ್ಲಿ ಈ ಒಂದು ಘಟನೆ ನಡೆದಿದೆ.
ರಾಜರಾಜೇಶ್ವರಿ ನಗರದಲ್ಲಿರುವ ಪಬ್ ಗೆ ಮೂರು ಸ್ನೇಹಿತರ ಜೊತೆಗೆ ಮೇಘರಾಜ್ ಹೋಗಿದ್ದ. ರಾತ್ರಿಯೆಲ್ಲರೂ ಕುಡಿದು ಪಾರ್ಟಿ ಮಾಡಿ ಊಟ ಮಾಡಿದ್ದರು. ಮನೆಗೆ ಹೋಗುವಾಗ ಎಲ್ಲರೂ ಬಂದಿದ್ದರು ತುಂಬಾ ಹೊತ್ತಾದರೂ ಮೇಘರಾಜ್ ಹೊರಬಾರದ ಹಿನ್ನೆಲೆಯಲ್ಲಿ, ಬಾತ್ರೂಮ್ಗೆ ಹೋಗಿ ಪರಿಶೀಲಿಸಿದಾಗ ಮೇಘರಾಜ ಶವವಾಗಿ ಪತ್ತೆಯಾಗಿದ್ದಾನೆ. ಆರ್ ಆರ್ ನಗರ ಠಾಣೆ ಪೋಲೀಸರಿಂದ ತನಿಖೆ ಮುಂದುವರೆದಿದೆ.