ಬೆಂಗಳೂರು : ಬೆಂಗಳೂರಿನ ಬನಶಂಕರಿ ಮೆಟ್ರೋ ಸ್ಟೇಷನ್ ಗೆ ಬೀಡಾಡಿ ದನ ನುಗ್ಗಿದೆ. ಮೆಟ್ರೋ ಸ್ಟೇಷನ್ ನಲ್ಲಿ ಹಸು ಕಂಡು ಪ್ರಯಾಣಿಕರು ಶಾಕ್ ಆಗಿದ್ದಾರೆ. ಹಸು ಏನಾದರೂ ಟ್ರ್ಯಾಕ್ಕೆ ನುಗ್ಗಿದ್ದರೆ, ದೊಡ್ಡ ಅನಾಹುತಾವೇ ನಡೆದು ಹೋಗುತ್ತಿತ್ತು.
ಕಳೆದ ಬುಧುವಾರ ರಾತ್ರಿ 8:00ಗೆ ಆಗಿರುವಂತಹ ಘಟನೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಸು ಮೆಟ್ರೋ ಸ್ಟೇಷನ್ ಗೆ ನುಗ್ಗಿರೋ ವಿಡಿಯೋ ವೈರಲ್ ಆಗಿದೆ. ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷದಿಂದ ಈ ಒಂದು ಘಟನೆ ನಡೆದಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.