ಕೋಲಾರ : ಕೋಲಾರದಲ್ಲಿ ಎಂದಿನಂತೆ ಜನರು ತಮ್ಮ ನಿತ್ಯ ಕಾರ್ಯಗಳಲ್ಲಿ ತೊಡಗಿದರು ಈ ವೇಳೆ ಏಕಾಏಕಿ ಭಯಾನಕ ಶಬ್ದವನ್ನು ಕೇಳಿದ್ದರಿಂದ ಮನೆಯಲ್ಲಿದ್ದವರು ಮನೆಯಿಂದ ಹೊರಗಡೆ ಓಡಿ ಬಂದಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಟೇಕಲ್ ಸುತ್ತಮುತ್ತ ಭಯಾನಕ ಶಬ್ದ ಕೇಳಿದ ಅನುಭವ ಆಗಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಈ ಒಂದು ಭಯಾನಕ ಶಬ್ದ ಕೇಳಿ ಬಂದಿದೆ ಶಬ್ದ ಕೇಳುತ್ತಿದ್ದಂತೆ ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.ಈ ವೇಳೆ ಆಕಾಶದಲ್ಲಿ ಜೆಟ್ ವಿಮಾನ ಕಂಡು ಬಂದಿದೆ. ಜೆಟ್ ವಿಮಾನದ ಶಬ್ದವಾ? ಯಾವುದಾದರೂ ಸ್ಫೋಟ ಸಂಭವಿಸಿದೆ ಎಂಬ ಆತಂಕ ಹುಟ್ಟಿಕೊಂಡಿದೆ.