ಮೈಸೂರು : ಮೈಸೂರಿನ ವಸ್ತು ಪ್ರದರ್ಶನದ ಬಳಿ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಅಂದಾಜು 10 ರಿಂದ 13 ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಮೊನ್ನೆ ವೆಂಕಟೇಶ್ ಎಂಬವರ ಭೀಕರ ಕೊಲೆಯಾಗಿತ್ತು.
ಮೈಸೂರು ದಸರಾಗೆ ಬಾಲಕಿ ಗೊಂಬೆ ಹಾಗು ಬಲೂನ್ ಮಾರಲು ಬಂದಿದ್ದಳು. ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








