ಶಿವಮೊಗ್ಗ: ಸಾಗರದ ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ಅಣಿಯಾಗಿದೆ. ಹೊಸ ಹೊಸ ವಿನೂತನ ಮಾದರಿಯ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಗಳೊಂದಿಗೆ ನಾಳೆ ಸಾಗರದಲ್ಲಿ ಹೊಸ ಶೋ ರೂಂ ಗ್ರಾಂಡ್ ಓಪನ್ ಆಗಲಿದೆ.
ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿರುವಂತ ಆರ್ ಬಿ ಡಿ ಮೋಟಾರ್ಸ್ ನ RBD ಮಹೇಶ್ ಅವರು, ಸಾಗರದಲ್ಲಿ ರಾಯಲ್ ಎನ್‌ಫೀಲ್ಡ್ ಮೋಟಾರ್ ಶೋ ರೂಂ ತೆರೆಯಬೇಕು ಎಂಬುದು ಬಹು ದಿನದ ಕನಸಾಗಿತ್ತು. ಆ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿತ್ತು. ಅದು ನನಸಾಗಿದೆ. ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ಆರ್ ಬಿ ಡಿ ಮೋಟಾರ್ಸ್ ನಿಂದ ನಾಳೆ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಆರಂಭಗೊಳ್ಳುತ್ತಿದೆ ಎಂದರು.
ಸಾಗರದ ಲೋಹಿಯಾ ನಗರ, ವಾರ್ಡ್ ನಂ.9, ಬಿಹೆಚ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ರಾಯಲ್ ಎನ್ ಫೀಲ್ಡ್ ಶೋ ರೂಂ ಉದ್ಘಾಟಿಸಲಿದ್ದಾರೆ. ಸಾಗರದ ಸಾರ್ವಜನಿಕರು, ಬುಲೆಟ್ ಪ್ರಿಯರು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.
ರಾಯಲ್ ಎನ್‌ಫೀಲ್ಡ್ ಎಲ್ಲಾ ಮಾದರಿಯ ಬೈಕ್ ಗಳು ಮಾರಾಟಕ್ಕೆ ಲಭ್ಯ
ಬುಲೆಟ್ ಬೈಕ್ ಅಂದ್ರೆ ಅದರಲ್ಲಿ ರೈಡಿಂಗ್ ಮಾಡೋದು ಬಹಳಷ್ಟು ಜನರಿಗೆ ಅಚ್ಚು ಮೆಚ್ಚು. ಬೆಟ್ಟ ಗುಡ್ಡಗಳಲ್ಲಿ ಬೈಕ್ ರೈಡಿಂಗ್ ಗೆ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಮಾತ್ರ ಹೇಳಿ ಮಾಡಿಸಿದಂತದ್ದು. ಈಗ ಬುಲೆಟ್ ಬೈಕ್ ಪ್ರಿಯರ ಆ ಆಸೆಯನ್ನು ಆರ್ ಬಿ ಡಿ ಮೋಟಾರ್ಸ್ ಈಡೇರಿಸುತ್ತಿದೆ.
ನಾಳೆ ಶೋ ರೂಂ ಗ್ರಾಂಡ್ ಓಪನ್ ಸಂದರ್ಭದಲ್ಲೇ ನಿಮಗೆ ರಾಯಲ್ ಎನ್‌ಫೀಲ್ಡ್ ನ ಎಲ್ಲಾ ಮಾದರಿಯ ಬೈಕ್ ಗಳು ಮಾರಾಟಕ್ಕೆ ಲಭ್ಯವಾಗಲಿದ್ದಾವೆ. ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರು ಇಂದೇ ತಮ್ಮ ನೆಚ್ಚಿನ ಬೈಕ್ ಬುಕ್ ಮಾಡುವಂತೆ ಆರ್ ಬಿ ಡಿ ಮೋಟಾರ್ಸ್ ಮನವಿ ಮಾಡಿದೆ.
ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್, ಮೀಟಿಯರ್, ಹಂಟರ್, ಹಿಮಾಲಯನ್, ಇಂಟರ್‌ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ ನಂತಹ ಜನಪ್ರಿಯ ಶ್ರೇಣಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಶ್ರೇಣಿಯ ಮೋಟಾರ್‌ಸೈಕಲ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಬ್ರ್ಯಾಂಡ್ ಸ್ಕ್ರ್ಯಾಮ್, ಶಾಟ್‌ಗನ್, ಸೂಪರ್ ಮೀಟಿಯರ್, ಕ್ಲಾಸಿಕ್ 650, ಬೇರ್ 650 ಮತ್ತು ಗೆರಿಲ್ಲಾ 450 ನಂತಹ ಹೊಸ ಸೇರ್ಪಡೆಗಳು ಮತ್ತು ರೂಪಾಂತರಗಳನ್ನು ಸಹ ಹೊಂದಿದೆ. ಈ ಎಲ್ಲಾ ಮಾದರಿಯ ಬುಲೆಟ್ ಬೈಕ್ ಗಳು ಸಾಗರದ ಆರ್ ಬಿ ಡಿ ಮೋಟಾರ್ಸ್ ನಲ್ಲಿಯೇ ನಿಮಗೆ ಲಭ್ಯವಾಗಲಿದೆ.
ಬಿಲ್ಡರ್ ಕ್ಷೇತ್ರದ ಬಳಿಕ ಬೈಕ್ ಉದ್ಯಮಕ್ಕೂ ಕಾಲಿಟ್ಟ RBD
ಸಾಗರದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ RBD ತುಂಬಾನೇ ಪ್ರಸಿದ್ದಿ. ಸಾಗರದ ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಲ್ಲಿ RBD ಮಹೇಶ್ ಹಾಗೂ ಜಲೀಲ್ ಮುಂಚೂಣಿಯಲ್ಲಿದ್ದು, ಅಷ್ಟೇ ಚಿರ ಪರಿಚಿತ ಹೆಸರುಗಳು ಕೂಡ. ರಾಯಲ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ನಿಂದ ಸಾಗರ, ಸೊರಬ, ಹೊಸದನಗ, ಶಿವಮೊಗ್ಗದ ವಿವಿಧೆಡೆ ರಿಯಲ್ ಎಸ್ಟೇಟ್ ಉದ್ಯಮವನ್ನು ಕೈಗೊಳ್ಳಲಾಗಿದೆ. ಕೈಗೆಟುಕುವ ಬೆಲೆಯಲ್ಲೂ ಸೈಟ್ ಮಾರಾಟವನ್ನು ಮಾಡಲಾಗುತ್ತಿದೆ. ನಿಮಗೂ ಬೇಕಂದ್ರೆ – +916362790533 ಅಥವಾ +919916887441 ನಂಬರ್ ಗೆ ಸಂಪರ್ಕಿಸಬಹುದು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಂತ RBD ಮಹೇಶ್ ಹಾಗೂ ಜಲೀಲ್, ಈಗ ಮೋಟಾರ್ಸ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದೇ ಆರ್ ಬಿ ಡಿ ಮೋಟಾರ್ಸ್ ನಿಂದ ಸಾಗರದಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ತೆರೆಯಲಾಗುತ್ತಿದೆ.
ಡಿಆಚ್ ಸ್ಟೂಡಿಯೋ, ಆರ್ ಬಿ ಡಿ ವೆಂಚರ್ಸ್ ನಲ್ಲೂ ಸಕ್ಸಸ್
ಸಾಗರದಂತ ತಾಲ್ಲೂಕಿನಲ್ಲಿ ರಾಯಲ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟು, ಇಂದು ಆರ್ ಬಿ ಡಿ ಎಂಬ ಕಂಪನಿಯೊಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಹುದೊಡ್ಡ ಯಶಸ್ಸು ಕಂಡಿದೆ. ಈ ಕಾರಣದಿಂದಲೇ ವಿವಿಧ ಕ್ಷೇತ್ರದಲ್ಲೂ ಆರ್ ಬಿ ಡಿ ತನ್ನ ಕದಂಬ ಬಾಹುವನ್ನು ಚಾಚಿಕೊಂಡಿದೆ. ರಿಯಲ್ ಎಸ್ಟೇಟ್ ಬಳಿಕ DeArc Studio ಎನ್ನುವಂತ ಆರ್ಕಿಟೆಕ್ಟ್ ಕಂಪನಿಯನ್ನು ಆರಂಭಿಸಿದೆ. ಅಲ್ಲದೇ ಆರ್ ಬಿ ಡಿ ವೆಂಚರ್ಸ್ ಎನ್ನುವಂತ ಕಂಪನಿಯನ್ನು ಆರಂಭಿಸಿ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಕೇಂದ್ರ ಸ್ಥಾನ ಮಾಡಿಕೊಂಡು ಮತ್ತಷ್ಟು ಔಧ್ಯಮಿಕ ಪ್ರಗತಿಯತ್ತ ದಾಪುಗಾಲಿಟ್ಟಿದೆ.
RBD ಕಂಪನಿಯ ಈ ಯಶಸ್ಸಿನ ಸರಮಾಲೆ ಮುಂದುವರೆಯಲಿ. ಇದೀಗ ನಾಳೆ ಸಾಗರದಲ್ಲಿ ಗ್ರಾಂಡ್ ಓಪನ್ ಆಗುತ್ತಿರುವಂತ ರಾಯಲ್ ಎನ್ ಫೀಲ್ಡ್ ಮೋಟಾರ್ ಶೋ ರೂಂನಲ್ಲಿಯೂ ಮಾರಾಟ ಹೆಚ್ಚುಗೊಂಡು ಸಕ್ಸಸ್ ಆಗಲಿ ಎಂಬುದು RBD ಸಮೂಹ ಸಂಸ್ಥೆಯ ಅಪಾರ ಹಿತೈಷಿಗಳು, ಅಭಿಮಾನಿಗಳ ಆಶಯವಾಗಿದೆ. ಆ ನಿಟ್ಟಿನಲ್ಲಿ ಬೆಳೆದು ಯಶಸ್ಸು ಕಾಣಲಿ ಎಂಬುದಾಗಿ ಕೆಎನ್ಎನ್ ಸಂಸ್ಥೆ ಕೂಡ ಆಶಿಸುತ್ತದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು