ದಾವಣಗೆರೆ : ಬಹುತೇಕರು ಬಿಸಿನೀರಿಗಾಗಿ ಮನೆಯಲ್ಲಿ ಬಾಯ್ಲರ್ ಬಳಕೆ ಮಾಡುತ್ತಾರೆ. ಹೀಗೆ ಮನೆಯಲ್ಲಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ದುರ್ಗಿಗುಡಿ ಉತ್ತರ ಭಾಗದಲ್ಲಿ ಮನೆಯಲ್ಲಿದ್ದಂತ ಬಾಯ್ಲರ್ ಸ್ಪೋಟಗೊಂಡ ಪರಿಣಾಮ 11 ವರ್ಷದ ಸ್ವೀಕೃತಿ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಈ ದುರಂತದಲ್ಲಿ ತೀರ್ಥಿಬಾಯಿ, ಹೂವಾ ನಾಯ್ಕ್, ಸುನೀತಾ ಬಾಯಿ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಮನೆಯಲ್ಲಿ ಬಾಯ್ಲರ್ ಆನ್ ಮಾಡಿದಾಗ ದಿಢೀರ್ ಸ್ಪೋಟಗೊಂಡಿದೆ. ಇದರಿಂದಾಗಿ ಬಾಯ್ಲರ್ ಪಕ್ಕದಲ್ಲೇ ಇದ್ದಂತ ಬಾಲಕಿ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಮೂವರು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.