ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 148 Liquid Medical Oxygen (LMO) ಸಂಗ್ರಹಣಾ ಟ್ಯಾಂಕ್ಗಳಿಗೆ Telemetry units ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಏಕ ಕಡತದಲ್ಲಿ COVID-19 ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ 148 Liquid Medical Oxygen (LMO) ಸಂಗ್ರಹಣಾ ಟ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. ದಿನಾಂಕ :17.02.2025ರಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭಾ ನಡವಳಿಯನ್ವಯ ಈ ಕೆಳಕಂಡಂತೆ ECRP-॥ ಅನುದಾನದ ಉಳಿತಾಯ ರೂ.865.80ಲಕ್ಷಗಳಲ್ಲಿ 3 1 148 Liquid Medical Oxygen (LMO) 2 i Telemetry units (Telemetry units application software subscription charges for 3 years) 2 ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಲಾಗಿದೆ.
ಬಿ) ಮರುಕಳಿಸುವ ವೆಚ್ಚ: ಟೆಲಿಮೆಟ್ರಿ ಘಟಕದ ಸಾಫ್ಟ್ವೇರ್, ಸಮಗ್ರ ಖಾತರಿ ಮತ್ತು ನಿರ್ವಹಣೆ ಮತ್ತು ಡೇಟಾ ಪ್ರಸರಣದ ವಾರ್ಷಿಕ ಶುಲ್ಕ ಪ್ರತಿ ಯೂನಿಟ್ಗೆ ರೂ. 0.95 ಲಕ್ಷ. 3 ವರ್ಷಗಳ ಒಟ್ಟು ಮರುಕಳಿಸುವ ವೆಚ್ಚ: 148* ರೂ.0.95 ಲಕ್ಷ *3 ವರ್ಷ = ರೂ. 421.80 ಲಕ್ಷ.
148 Liquid Medical Oxygen (LMO) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ECRP-II ಅನುದಾನದ ಉಳಿತಾಯ ರೂ.865.80ಲಕ್ಷಗಳಲ್ಲಿ 3 ವರ್ಷಗಳಿಗೆ 148 Liquid Medical Oxygen (LMO) Telemetry units (Telemetry units application software subscription charges for 3 years) ಗಳನ್ನು ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.