ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಹೌಸ್‌ಗೆ ಇದೀಗ ಸಂಕಷ್ಟ ಎದುರಾಗಿದ್ದು, ಕೆಲವೇ ಹೊತ್ತಿನಲ್ಲಿ ಬಿಗ್ ಬಾಸ್ ಹೌಸ್ ಗೆ ಬೀಗ ಮುದ್ರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗಮುದ್ರೆ ಬೀಳಲಿದೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್ ಬಳಿ ದೌಡಾಯಿಸುತ್ತಿದ್ದು, ವೇಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಬಿಗಮುದ್ರೆ ಬೀಳಲಿದೆ ಎನ್ನಲಾಗುತ್ತಿದೆ.
ಹೌದು ಬಿಗ್ ಬಾಸ್ ಹೊಸ ವಿಡಿಯೋದಿಂದ ಬೀಗ ಮುದ್ರೆ ಬೀಳಲಿದೆ. ಬಿಗ್ ಬಾಸ್ ಬಂದ್ ಮಾಡುವಂತೆ ನಿನ್ನೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಪಡೆಯಲು ಜಾಲಿವುಡ್ ವೀಡಿಯೋಸ್ ಹಿಂದಿಟು ಹಾಕಿದೆ. ಹಾಗಾಗಿ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪೊಲೀಸರು ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್ ಮನೆಗೆ ಬೀಗ ಜಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ ಅಧಿಕಾರಿಗಳು ಸದ್ಯಕ್ಕೆ ಜಾಲಿವುಡ್ ಸ್ಟುಡಿಯೋಸ್ ಬಳಿ ಆಗಮಿಸುತ್ತಿದ್ದು ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.