ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದರಲ್ಲೂ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಜಾತಾ ಭಟ್ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬುರುಡೆ ಜೊತೆ ಸೇರಿಕೊಂಡು ತಪ್ಪು ಮಾಡಿದೆ. ಆ ಪಶ್ಚಾತಾಪ ನನಗೆ ಈಗಲೂ ಕೂಡ ಕಾಡುತ್ತಿದೆ. ಹಾಗಾಗಿ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಯಾಚಿಸುತ್ತೇನೆ ಎಂದು ಸುಜಾತಾ ಭಟ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ನಾನು ಕ್ಷಮೆ ಕೇಳುತ್ತೇನೆ. ನನ್ನಿಂದ ತಪ್ಪಾಗಿದೆ ಎಂದು ಅವರಲ್ಲಿ ಕ್ಷಮೆ ಕೇಳುತ್ತೇನೆ 60 ವರ್ಷದ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿದೆ. ಹಿಂದೆ ನನ್ನ ಪಾಡಿಗೆ ನಾನು ಇದ್ದೆ, ನನ್ನ ಜೀವನ ತುಂಬಾ ಚೆನ್ನಾಗಿತ್ತು. ಅದಾದ ಮೇಲೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಜೀವನ ಸಂಪೂರ್ಣ ಆಯೋಮಯವಾಗಿದ್ದು ಜೀವನ ನಡೆಸುವುದು ಕಷ್ಟವಾಗುತ್ತಿದೆ.
ಇಂದಿನ ಜೀವನ ಹೇಗೆ ಎನ್ನುವುದು ಕೊರಗುತ್ತಿದ್ದೇನೆ ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ. ನನ್ನಿಂದ ಧರ್ಮಸ್ಥಳಕ್ಕೆ ಕಲ್ಲು ಹೊಡೆಯುತ್ತೇನೆ ಅಂತ ಹೇಳಿದ್ದೇನೆ ಒಂದು ಯೂಟ್ಯೂಬ್ ಚಾನೆಲ್ನಲ್ಲಿ ಆ ರೀತಿ ಹೇಳಿಕೆ ನೀಡಿದ್ದೇನೆ. ಧರ್ಮಸ್ಥಳ ದೇವರಿಗೆ ಕಲ್ಲು ಹೊಡಿತೇನೆ ಅಂತ ಹೇಳಿಲ್ಲ ಆದರೆ ಧರ್ಮಸ್ಥಳಕ್ಕೆ ಕಲ್ಲು ಹೊಡೆಯುತ್ತೇನೆ ಅಂತ ಹೇಳಿದ್ದೇನೆ. ಅದನ್ನು ಬೇರೆ ರೀತಿ ತಿರುಚಲಾಗಿದೆ ಆದರೂ ನಾನು ಧರ್ಮಸ್ಥಳಕ್ಕೆ ಹೋಗಿ ಕ್ಷಮೆಯಾಚಿಸುತ್ತೇನೆ ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗಿ ದೇವರ ಮುಂದೆ ಕ್ಷಮೆಯಾಚಿಸಿ ವೀರೇಂದ್ರ ಹೆಗಡೆ ಅವರನ್ನು ಮಾತನಾಡಿಸಿ ಅವರ ಮುಂದೆ ತಪ್ಪಾಗಿದೆ ಎಂದು ಸಮಯ ಹಾಕಿಸಿಕೊಂಡು ದೇವರ ದರ್ಶನ ಮಾಡಿಕೊಂಡು ಬರುತ್ತೇನೆ ಎಂದರು.