ಬೆಂಗಳೂರು : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ರಕ್ಷಿತಾ (26) L ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ತಿಳಿದು ಬಂದಿದ್ದು, 4 ವರ್ಷದ ಹಿಂದೆ ರವಿಶ್ ಎನ್ನುವ ವ್ಯಕ್ತಿಯ ಜೊತೆ ರಕ್ಷಿತಾ ಮದುವೆಯಾಗಿದ್ದರು. ಲಗ್ಗೆರೆಯ ಮುನೇಶ್ವರ ಬಳಿ ಈ ಒಂದು ಕುಟುಂಬ ವಾಸವಾಗಿತ್ತು.
ಮೂರು ವರ್ಷದಿಂದ ರವೀಶ್ ಪತ್ನಿಯ ಜೊತೆಗೆ ಗಲಾಟೆ ಮಾಡುತ್ತಿದ್ದ. ಅಲ್ಲದೇ ರವೀಶ್ ಸಹೋದರ ಲೋಕೇಶ್ ರಕ್ಷಿತಾ ಜೊತೆ ಗಲಾಟೆ ಮಾಡಿದ್ದಾರೆ. ಮನೆಯಲ್ಲೇ ಸಹೋದರ ಲೋಕೇಶ್ ವಾಸವಾಗಿದ್ದ. ಗಲಾಟೆಯಿಂದ ಮನನೊಂದು ರಕ್ಷಿತಾ ಮನೆಯಲ್ಲಿಯೇ ಆತ್ಮಹತ್ಯೆ ಶರಣಾಗಿದ್ದಾರೆ.
ಧನಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಮೃತಳ ಪತಿ ರವೀಶ್, ಗಂಡ ರವಿಶನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ರಕ್ಷಿತಾ ಸಂಬಂಧಿಕರು ಇದೀಗ ರವೀಶ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೂರು ವರ್ಷದ ಮಗಳ ಮೇಲು ಕೂಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.