ಬೆಂಗಳೂರು : ಸುಪ್ರೀಂ ಕೋರ್ಟ್ ಸಿಜೆಐ ಬಿಆರ್ ಗವಾಯಿ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ನಾಚಿಕೆಗೇಡು ವಿಷಯ ವೈಯಕ್ತಿಕವಾಗಿ ಇದನ್ನು ಧಿಕ್ಕರಿಸುತ್ತೇನೆ. ಭಾರತದಲ್ಲಿ ಎಲ್ಲಾ ಧರ್ಮಗಳು ಬಹಳ ವರ್ಷಗಳಿಂದ ಇವೆ ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಯುವಕರು ಗಮನಿಸಬೇಕು ಎಂದು ಸಂತೋಷ್ ಲಾಡ್ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸನಾತನ ಧರ್ಮ, ಹಿಂದೂ ಧರ್ಮ, ಕ್ರಿಶ್ಚಿಯನ್ನ ಧರ್ಮ, ಮುಸ್ಲಿಂ ಧರ್ಮ ಎಲ್ಲಾ ಧರ್ಮಗಳು ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇವೆ. ಆದರೆ ದೇಶ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದನ್ನು ಯೋಚನೆ ಯುವಕರು ವಿಶೇಷವಾಗಿ ಯೋಜನೆ ಮಾಡಲೇಬೇಕು. ಭಾರತ ಧರ್ಮನ ಮತ್ತು ಜಾತಿನ ಸೀಮಿತ ಆಗಿರುವಂತಹ ದೇಶ ಅಲ್ಲ. ಸಿಜೆಐ ಅವರು ಮೊನ್ನೆ ಆರ್ ಎಸ್ ಎಸ್ ಸಭೆಗೆ ಹೋಗಲ್ಲ ಅಂತ ಹೇಳಿಕೆ ನೀಡಿರುವ ಹಿನ್ನೆಲೆಯಿಂದ ಶೂ ಎಸೆದಿರಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.