ಬೆಂಗಳೂರು : ಬೆಂಗಳೂರಲ್ಲಿ ಜಾತಿ ಗಣತಿ ನಡೆಸಿದ ಸಿಬ್ಬಂದಿಗಳಿಗೆ ಕೇಂದ್ರ ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಪ್ರಶ್ನೆಗಳು ಬೇಕಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತದೆ ಅದನ್ನ ನೀವೇ ಮಾಡುವುದು ಹೇಗೆ ಮಾಡಿಸುತ್ತೆ ಅಂತ ನೀವೇ ನೋಡಿ. ಸರಕಾರಿ ನೌಕರರು ಸರ್ಕಾರದ ಏಜೆಂಟ್ ಆಗಬಾರದು. ಇಷ್ಟು ಜನ ಯಾಕೆ ಬಂದಿದ್ದೀರಿ? ಎಷ್ಟು ಪ್ರಶ್ನೆಗಳು ಬೇಕಾ ಇದೆಲ್ಲ ನೀವು ಸರ್ಕಾರಕ್ಕೆ ತಿಳಿಸಬೇಕಲ್ವಾ? ಅಂತ ವಿ ಸೋಮಣ್ಣ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಕೇಂದ್ರ ಸಚಿವ ವಿ ಸೋಮಣ್ಣ ಮನೆಯಲ್ಲಿ 9 ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲಾಯಿತು. ಈ ವೇಳೆ ಉಪಜಾತಿ ಯಾವುದು ಅಂತ ಕೇಳಿದಾಗ ಅದೆಲ್ಲಾ ಯಾಕೆ ಬೇಕು ಅಂತ ಪ್ರಶ್ನಿಸಿದರು. ಬಳಿಕ ಸಿದ್ದರಾಮಯ್ಯ ಜಾತಿ ಎಂದು ಬರೆದುಕೊಳ್ಳಿ ಎಂದರು. ಮದುವೆ ಆದಾಗ ನಿಮಗೆ ಎಷ್ಟು ವರ್ಷ ಅಂತ ಕೇಳಿದಾಗ, ದುರಂತ ನಮ್ಮ ಅಮ್ಮನ ಕೇಳಬೇಕು 26 ಅಂತ ಬರೆದುಕೊಳ್ಳಿ ಎಂದರು.
ಇದು ಸಿದ್ದರಾಮಯ್ಯ ವೋಟ್ ಗಾಗಿ ಸಮೀಕ್ಷೆ ಮಾಡಿಸುತ್ತಿರುವುದು. ಯಾರು ಅವಿವೇಕಿಗಳು ಹೇಳಿ ಈ ಸಮೀಕ್ಷೆ ಮಾಡಿಸುತ್ತಿರುವುದು ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೆಸರನ್ನೇ ಹಾಕಿಕೊಳ್ಳಿ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ಉತ್ತರ ಕೊಡಕ್ಕಾಗದ ಪ್ರಶ್ನೆಗಳನ್ನೆಲ್ಲ ನೀವು ಕೇಳುತ್ತಿದ್ದೀರಿ. ಯಾವನೋ ತಲೆ ಕೆಟ್ಟಿರುವರು ಮಾಡಿದ್ದು ಅವನನ್ನು ಇಲ್ಲಿ ಕರೆಯಿರಿ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಯಾವ ಗ್ರೂಪ್ ಹಾಕುತ್ತೀರಿ ಅಂತ ಸಿಬ್ಬಂದಿಗಳಿಗೆ ಮರು ಪ್ರಶ್ನಿಸಿದರು.