ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರ್ಕಾರಿ ಸಂಸ್ಥೆ, ನಿಗಮ, ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವಂತ ವಿವಿಧ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಕುರಿತಂತೆ ಕೆಇಎ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಖಾಲಿ ಇರುವಂತ 18 ಹುದ್ದೆ, ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವಂತ 14 ಸೇರಿದಂತೆ 394 ಹುದ್ದೆಗಳ ನೇಮಕಾತಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೇಮಕಾತಿ ಹುದ್ದೆಗಳ ವಿವರ
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- 18 ಹುದ್ದೆಗಳು
- ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ – 14 ಹುದ್ದೆಗಳು
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಬೆಂಗಳೂರು – 40 ಹುದ್ದೆಗಳು
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ- 63 ಹುದ್ದೆ
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- 19 ಹುದ್ದೆ
- ಕೃಷಿ ಮಾರಾಟ ಇಲಾಖೆ- 180 ಹುದ್ದೆಗಳು
- ತಾಂತ್ರಿಕ ಶಿಕ್ಷಣ ಇಲಾಖೆ – 50 ಹುದ್ದೆಗಳು
- ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದಲ್ಲಿ – 10 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ
- ಪ್ರಥಮ ದರ್ಜೆ ಸಹಾಯಕರಿಗೆ – ಪದವಿ
- ದ್ವಿತೀಯ ದರ್ಜೆ ಸಹಾಯಕರಿಗೆ – ದ್ವಿತೀಯ ಪಿಯುಸಿ
- ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗೆ- ಕಲಾ, ವಾಣಿಜ್ಯ, ವಿಜ್ಞಾನ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
- ನಿರ್ವಾಹಕರ ಹುದ್ದೆ – ಪಿಯುಸಿ
- ಸಹಾಯಕ ಲೆಕ್ಕಿಗ – ಬಿಕಾಂ
- ಅಧಿಕಾರಿ – ಪದವಿ ಜೊತೆಗೆ ಎಂಬಿಎ
- ಕಿರಿಯ ಅಧಿಕಾರಿ- ಎಂಎಸ್ಸಿ ಕೆಮಿಸ್ಟ್ರಿ
- ಸಹಾಯಕ ಗ್ರಂಥಪಾಲಕರು – ಎಂಎಸ್ಸಿ ಲೈಬ್ರರಿ ಸೈನ್ಸ್
- ಗ್ರಂಥಪಾಲಕರು – ಎಂಲಿಬ್
- ಜೂನಿಯರ್ ಪ್ರೋಗ್ರಾಮರ್- ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ
- ಸಹಾಯಕ ಇಂಜಿನಿಯರ್- ಸಿವಿಲ್ ಇಂಜಿನಿಯರಿಂಗ್
- ಸಹಾಯಕ ಅಭಿಯಂತರರು- ಬಿಇ ಸಿವಿಲ್
- ಕಿರಿಯ ಅಭಿಯಂತರರು- ಡಿಪ್ಲೋಮಾ ಸಿವಿಲ್
- ಮಾರುಕಟ್ಟೇ ಮೇಲ್ವಿಚಾರಕರು – ಬಿಎಸ್ಸಿ ಅಕ್ರಿಕಲ್ಚರ್ ಮಾರ್ಕೇಟಿಂಗ್.
ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷ
ಈ ಮೇಲ್ಕಂಡ 394 ಕೆಇಎ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ, ಇತರೆ ಮಾಹಿತಿಗೆ ಸಂಬಂಧಿಸಿದಂತೆ http://kea.kar.nic.in ಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.