ಬೆಂಗಳೂರು: ನಗರದ ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಪ್ರಯಾಣಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದಂತ ಮತ್ತೊಂದು ಘಟನೆ ನಡೆದಿತ್ತು. ರೈಲಿನ ಅಡಿಯಲ್ಲಿ ಸಿಲುಕಿದ್ದಂತ ಯುವಕನನ್ನು ರಕ್ಷಿಸಿರುವಂತ ಸಿಬ್ಬಂದಿಗಳು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ಹಳಿಗೆ ವ್ಯಕ್ತಿಯೊಬ್ಬ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದನು.
ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಜಿಗಿದ ನಂತ್ರ ರೈಲು ಸಾಗಿತ್ತು. ಹೀಗಾಗಿ ರೈಲಿನ ಅಡಿಯಲ್ಲಿ ಯುವಕ ಸಿಲುಕಿಕೊಂಡಿದ್ದನು. ಹೀಗೆ ಆತ್ಮಹತ್ಯೆಗೆ ಯತ್ನಿಸಿ, ನಮ್ಮ ಮೆಟ್ರೋ ರೈಲಿನಡಿ ಸಿಲುಕಿದ್ದಂತ ಯುವಕನನ್ನು ರಕ್ಷಿಸಲಾಗಿದೆ. ಗಾಯಗೊಂಡಿರುವಂತ ಆತನನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿ.ಜಿ ದ್ವಾರಕನಾಥ್ ವಿಧಿವಶ
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?