ಚಾಮರಾಜನಗರ : ಕೌಟುಂಬಿಕ ಕಲಹದಿಂದ ಬೇಸತ್ತ ಪತಿ, ಪತ್ನಿಯ ಎದುರೇ ನದಿಗೆ ಹಾರಿದ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಪತ್ನಿ ರಾಜೇಶ್ವರಿ ಎದುರುಗಡೆ ಪತಿ ಮಂಜುನಾಥ್ ನದಿಗೆ ಹಾರಿದ್ದಾರೆ.
ಬೈಕ್ ನಲ್ಲಿ ತೆರಳುತ್ತಿರುವಾಗಲೇ ಪದೇಪದೇ ದಂಪತಿಗಳ ನಡುವೆ ಜಗಳ ಆಗಿದೆ. ಇಬ್ಬರೂ ಬೈಕ್ ನಲ್ಲಿ ತೆರಳುವಾಗ ಕಲಹ ನಡೆದಿದೆ. ನಾ ಸತ್ತರೆ ನಿಮಗೆ ನೆಮ್ಮದಿ ಎಂದು ಪತಿ ಮಂಜುನಾಥ್ ಬೈಕ್ ನಿಲ್ಲಿಸಿ ಪತ್ನಿಯ ಎದುರಲ್ಲೇ ನದಿಗೆ ಹಾರಿದ್ದಾರೆ. ಮಂಜುನಾಥ್ ನದಿಯಲ್ಲಿ ಕಣ್ಮರೆಯಾಗಿದ್ದು, ಸದ್ಯ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಡಿಮೆ ಸ್ಥಳಕ್ಕೆ ಕೊಳ್ಳೇಗಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.