ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಡಿನೋನೇಟರ್ ಗೆ ಮಿಂಚು ಬಡಿದು ಓರ್ವ ಸಾವನಪ್ಪಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಉರಿಗಹಳ್ಳಿ ಬಳಿಯ ನೀವು ಸ್ಯಾಂಡ್ ಕ್ರಷರ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಉರಗಹಳ್ಳಿಯಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕ ಕಿಶನ್ (45) ಸಾವನ್ನಪ್ಪಿದ್ದಾರೆ. ಇನ್ನು ಘಟನೆಯೆಲ್ಲಿ ನಿಜಾಂ ಹಾಗೂ ಶರ್ಮ ಎಂಬವರಿಗೆ ಗಂಭೀರವಾದ ಗಾಯಳಾಗಿವೆ. ಬಂಡೆ ಸ್ಫೋಟಿಸಲು ದಿನಾನೆಟರ್ ಅಳವಡಿಸಲು ತಯಾರಿ ನಡೆದಿತ್ತು. ನಿನ್ನೆ ಸಂಜೆ ಡಿಟೋನೇಟರ್ ಗೆ ಮಿಂಚು ಬಡಿದು ಈ ಒಂದು ದುರಂತ ಸಂಭವಿಸಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.