ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಇದುವರೆಗೂ ಬೆಂಗಳೂರು ಹೊರತುಪಡಿಸಿ, 63% ರಷ್ಟು ಜಾತಿ ಗಣತಿ ಸಮೀಕ್ಷೆ ನಡೆದಿದೆ ಇದೀಗ ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ ಆರಂಭವಾಗಿದ್ದು, ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿವೆ.
ಹೌದು ಬೆಂಗಳೂರಿನಲ್ಲಿ ಜಾತಿಗಣತಿಗೆ ಆರಂಭದಲ್ಲೇ ವಿಘ್ನವಾಗಿದ್ದು, ಸಿಬ್ಬಂದಿಯನ್ನು ಸೆಲೆಕ್ಟ್ ಮಾಡಿದ್ದೆ ಒಂದು ವಾರ್ಡಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದೇ ಮತ್ತೊಂದು ವಾರ್ಡ್ ಗೆ ನೂರಕ್ಕೆ ಎಷ್ಟು ಸಿಬ್ಬಂದಿಗೆ ವಾರ್ಡ್ ಬದಲಾಗಿದೆ. ದೂರ ಹೋಗಿ ಸಮೀಕ್ಷೆ ಮಾಡುವುದು ಹೇಗೆ ಅಂತ ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹೋಗುವುದರಲ್ಲಿ ನಮಗೆ ಸಮಯ ಆಗುತ್ತದೆ ಸಮೀಕ್ಷೆ ಮಾಡುವುದು ಹೇಗೆ ಅಂತ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.
ಒಬ್ಬರು ಸಿಬ್ಬಂದಿ ಸಂಪೂರ್ಣವಾಗಿ ಕುರುಡವಾಗಿದ್ದು, ನನಗೆ ಕಣ್ಣು ಕಾಣಿಸಲ್ಲ ಯಾವುದೇ ಆಪರೇಷನ್ ಮಾಡಲು ಸಹ ಬರದಂತೆ ಕಣ್ಣು ಕಾಣಿಸಲ್ಲ. ಹೀಗಿದ್ದ ಮೇಲೆ ನಮಗೆ ದೂರದ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಹೀಗಾದರೆ ಸಮೀಕ್ಷೆ ಮಾಡುವುದು ಹೇಗೆ ಎಂದು ಅಳಲು ತೋಡಿಕೊಂಡರೆ, ಮತ್ತೊರ್ವ ಸಿಬ್ಬಂದಿ ನನಗೆ ಹಾರ್ಟಲ್ಲಿ ಬೈಪಾಸ್ ಸರಿ ಆಗಿದೆ ಅಷ್ಟು ದೂರ ಹೋಗಿ ಸಮೀಕ್ಷೆ ಮಾಡಕ್ಕೆ ಆಗಲ್ಲ ಎಂದು ಇಂದು ಅಸಹಾಯಕತೆ ತೋರ್ಪಡಿಸಿದ್ದಾರೆ. ಆದಷ್ಟು ಬೇಗ ಸರ್ಕಾರ ಇದನ್ನು ಬಗೆಹರಿಸಲಿ ಎಂದು ಆಗ್ರಹಿಸಿದ್ದಾರೆ.