ಬೆಂಗಳೂರು : ಮಹಿಳೆಯೋರ್ವಳು ಪ್ರಿಯಕರನಿಗೆ ತನ್ನ ಸ್ನೇಹಿತೆಯನ್ನು ಪರಿಚಯಿಸಿದ್ದು ಈ ವೇಳೆ ಆತ ಮಹಿಳೆಯ ಸ್ನೇಹಿತೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಷಯ ತಿಳಿದು ಮಹಿಳೆ ಅವರಿಬ್ಬರೂ ಇರುವ ಲಾಡ್ಜ್ ಗೆ ತೆರಳಿ ಗಲಾಟೆ ಮಾಡಿದ್ದಾಳೆ. ಆಗ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶೋಧ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡಿದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ಯಶೋಧಗೆ ಗಂಡ ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ, ಆಕೆ ಪಕ್ಕದ ಏರಿಯಾದ ಮನೆಯಲ್ಲಿ ಆಡಿಟರ್ ಆಗಿದ್ದ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು ಪ್ರಿಯಕರನಿಗೆ ಪರಿಚಯಿಸಿದ್ದರು.
ಪ್ರಿಯಕರ ಯಶೋಧ ಸ್ನೇಹಿತೆ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಯಶೋಧ ಕಿವಿಗೆ ಬಿದ್ದಿದೆ. ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್‌ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಆಗ ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.