ನವದೆಹಲಿ : ಮಧ್ಯಪ್ರದೇಶ ಹಾಗು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಸರಣಿ ಸಾವು ಸಂಭವಿಸಿದ್ದು, ಇದುವರೆಗೂ ಕೆಮಿನ ಸಿರಪ್ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಿರಪ್ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಶೀತ ಕೆಮ್ಮು ಔಷಧಿ ನೀಡಬೇಡಿ, 5 ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಕಾದರೆ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಎಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮೊದಲು ಹೈಡ್ರೇಶನ್ ಹಾಗೂ ರೆಸ್ಟ್ ಮಾಡುವುದು ಮೊದಲ ಆದ್ಯತೆ ಆಗಿರಬೇಕು ಎಂದು ಸೂಚನೆ ನೀಡಿದೆ.
ಔಷಧ ನಿಯಂತ್ರಕ ಅಮಾನತು
ಕೆಮ್ಮು ಅಂತ ಕೊಟ್ಟ ಸಿರಪ್ ಗೆ ಮೃತ ಮಕ್ಕಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ 9 ಮತ್ತು ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕೇಸರ್ ಫಾರ್ಮಾ ಕಂಪನಿಯ 19 ಮೆಡಿಸನ್ ಇದೀಗ ಸ್ಥಗಿತಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಔಷಧ ನಿಯಂತ್ರಕನನ್ನು ಅಮಾನತುಗೊಳಿಸಲಾಗಿದೆ, ರಾಜಾರಾಮ್ ಶರ್ಮಾನನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ.