ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್ 25)ಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿವರಗಳನ್ನು ತಿದ್ದುಪಡಿ ಮಾಡಲು ಅ.6ರವರೆಗೆ (ಸಂಜೆ 5.30) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಮೊಬೈಲ್ ದೂರವಾಣಿ ಸಂಖ್ಯೆ ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿನ ಎಲ್ಲ ವಿವರಗಳ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಒಂದು ವೇಳೆ ದೂರವಾಣಿ ಸಂಖ್ಯೆ ಬದಲಿಸಿಕೊಳ್ಳಬೇಕೆನ್ನುವವರು ಖುದ್ದು ಕೆಇಎಗೆ ಬಂದು ಅರ್ಜಿ ಕೊಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ಎಚ್.ಪ್ರಸನ್ನ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಒಮ್ಮೆ ತಿದ್ದುಪಡಿ ಮಾಡಿದ ನಂತರ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಎಚ್ಚರ ವಹಿಸಲು ಅವರು ಸಲಹೆ ನೀಡಿದ್ದಾರೆ. ಪುನಃ ತಿದ್ದುಪಡಿ ಸಂಬಂಧ ಯಾವುದೇ ಮನವಿಯನ್ನು ಪುರಸ್ಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
#KSET-25: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿವರಗಳನ್ನು ತಿದ್ದುಪಡಿ ಮಾಡಲು ಅ.6ರವರೆಗೆ (ಸಂಜೆ 5.30) #KEA ಅವಕಾಶ ಕಲ್ಪಿಸಿದೆ.
ಮೊಬೈಲ್ ದೂರವಾಣಿ ಸಂಖ್ಯೆ ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿನ ಎಲ್ಲ ವಿವರಗಳ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಒಂದು ವೇಳೆ… pic.twitter.com/iCz7dejhe6
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 3, 2025
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್