ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ರಸ್ತೆ ಅಪಘಾತ ಸಂಭವಿಸಿದ್ದು, ಜಲ್ಲಿಕಲು ಇದ್ದಿದ್ದರಿಂದ ರಸ್ತೆಗೆ ಯುವತಿಯರಿದ್ದ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ಕೆಳಗೆ ಬಿದ್ದ ಯುವತಿಯರ ಮೇಲೆ ಕ್ಯಾಂಟರ್ ಹರಿದು ಸ್ಥಳದಲ್ಲೇ ಯುವತಿರಿಬ್ಬರು ಸಾವನ್ನಪ್ಪಿರುವ ಘಟನೆ ಶಿವನಾಪುರ ಕ್ರಾಸ್ ಬಳಿ ಈ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಶಿವನಾಪುರ ಎಂಬಲ್ಲಿ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಶೈಲಾ (25) ಹಾಗೂ ಶ್ವೇತಾ (22) ಸಾವನಪ್ಪಿದ್ದಾರೆ. ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಕಿಲಾಡಿದ್ದು ಜಲ್ಲಿಕಲಿನಿಂದಾಗಿ ಬೈಕ್ ಸ್ಕೆಡ್ ಆಗಿ ಇವತಿಯೊಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಕೆಳಗಿದ್ದ ಯುವತಿಯರ ಮೇಲೆ ಹರಿದಿದೆ. ಇವಳೆ ಇಬ್ಬರು ಯುವತಿಯರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮತವತಿಯರು ಹೊಸಕೋಟೆ ತಾಲೂಕಿನ ಅತಿವತ್ತ ಗ್ರಾಮದವರು ಎಂದು ತಿಳಿದುಬಂದಿದೆ.