ಬೆಂಗಳೂರು : ನಟ ದರ್ಶನ್ ಅವರೊಂದಿಗೆ ಬುಲ್ ಬುಲ್ ಚಿತ್ರದೊಂದಿಗೆ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಡಿಂಪಲ್ ಕ್ವೀನ್ ಎಂದೆ ಅಭಿಮಾನಿಗಳನ್ನು ಹೊಂದಿರುವ ನಟಿ ರಚಿತಾ ರಾಮ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇದೆ ವೇಳೆ ಅಭಿಮಾನಿಗಳಿಗೆ ನಟಿ ರಚಿತಾ ರಾಮ್ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನಾನು ಖಂಡಿತವಾಗು, ಮದುವೆ ಆಗಲೇಬೇಕು ಅಂತ ನಿರ್ಧರಿಸಿದ್ದೇನೆ ಆದಷ್ಟು ಬೇಗ ಮದುವೆ ಆಗುತ್ತಾನೆ ಮನೆಯಲ್ಲಿ ಹುಡುಗನ ಹುಡುಕ್ತಾಇದ್ದಾರೆ ಅರೆಂಜ್ ಮ್ಯಾರೇಜ್ ಆಗಿ ಆಗುತ್ತೇನೆ. ನನಗೆ ಕಂಕಣ ಭಾಗ್ಯ ಯಾವಾಗ ಕೂಡಿ ಬರುತ್ತೋ ಗೊತ್ತಿಲ್ಲ ಆದರೆ ಆದಷ್ಟು ಬೇಗ ಮದುವೆ ಆಗುತ್ತೇನೆ ಅಂತ ನಿರ್ಧರಿಸಿದ್ದೇನೆ ಎಂದರು.
ಇದೆ ವೇಳೆ ಮೂಗು ಬೊಟ್ಟು ಚುಚ್ಚಿಸಿಕೊಳ್ಳುಬೇಕು ತುಂಬಾ ಆಸೆ ನನ್ನ ಇತ್ತು. ಅಮ್ಮನಿಗೂ ಕೂಡ ಮೂಗು ಬೊಟ್ಟು ಚುಚ್ಚಬೇಕು ಅಂತ ಆಸೆ ಇತ್ತು, ನವರಾತ್ರಿ ಸಂದರ್ಭದಲ್ಲಿ ಒಳ್ಳೆಯ ದಿನಾಂಕ ಮೂಗುಬಿಟ್ಟು ಚುಚ್ಚಿಸಿಕೊಂಡಿದ್ದೇನೆ. ಈ ವೇಳೆ ಮಾಧ್ಯಮದವರು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಮಾಡಿದಾಗ ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆ ಇಲ್ಲ ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದರು.