ಮೈಸೂರು : ಕಳೆದ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲದರ ಮೇಲು ಜಿಎಸ್‌ಟಿ ಹೆಚ್ಚಳ ಮಾಡಿದ್ದು, ಇದೀಗ ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸಿದೆ. ಇದರಿಂದ ರಾಜ್ಯಕ್ಕೆ 15 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿದ ವಿಚಾರವಾಗಿ ಜಿಎಸ್‌ಟಿ ಕಡಿತದಿಂದ ನಮಗೆ 15 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಕಡಿಮೆ ಮಾಡಿದನ್ನ ಸ್ವಾಗತಿಸಬೇಕು ನಷ್ಟ ನಾವೇ ಅನುಭವಿಸಬೇಕು. ಎಂಟು ವರ್ಷ ಕೇಂದ್ರ ಸರ್ಕಾರ ಅತಿ ಹೆಚ್ಚು ಜಿಎಸ್‌ಟಿ ವಸೂಲಿ ಮಾಡಿದೆ. ಆ ಹಣವನ್ನು ಈಗ ವಾಪಸ್ ಕೊಡುತ್ತಾರಾ? ಜಾಸ್ತಿ ಮಾಡುವುದು ಇವರೇ ಕಡಿಮೆ ಮಾಡುವುದು ಇವರೇ ಚುನಾವಣೆ ಗೋಸ್ಕರ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಣ ಬಿಡುಗಡೆ ವಿಚಾರವಾಗಿ ರಾಜಕೀಯ ಮೊದಲಿನಿಂದಲೂ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ನಮ್ಮ ತೆರಿಗೆ ಪಾಲನ್ನು ನ್ಯಾಯಸಮ್ಮತವಾಗಿ ಕೇಳುವುದು ತಪ್ಪ? ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಅಗತ್ಯವಿದ್ದರೆ ಕೋರ್ಟ್ ಮೆಟ್ಟಿಲೇರಿ ನಮ್ಮ ಪಾಲು ಪಡೆಯುತ್ತೇವೆ. ಬಿಜೆಪಿ ಸಂಸದರು, ಕೇಂದ್ರ ಸಚಿವರು ಮೋದಿ ಮುಂದೆ ಮಾತಾಡಲ್ಲ. ಮೋದಿಯನ್ನು ಹೊಗಳುವುದಷ್ಟೇ ರಾಜ್ಯ ಬಿಜೆಪಿ ಸಂಸದರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.