ತಮಿಳುನಾಡು : ಕನ್ನಡ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಹೆಸರುವಾಸಿಯಾದ ಖ್ಯಾತ ಬಹುಭಾಷಾ ನಟಿ ತ್ರಿಷಾ ಮನೆಗೆ ಬಾಂಬ್ ಸ್ಪೋಟಿಸುವ ಬೆದರಿಕೆ ಕರೆ ಬಂದಿದೆ.
ಹೌದು ಬೆಳ್ಳಂಬೆಳಿಗ್ಗೆ ಪೊಲೀಸರಿಗೆ ವಿಪರೀತ ಕೆಲಸ ಕೊಟ್ಟಿದ್ದಾರೆ ಕೆಲ ದುರುಳರು. ಖ್ಯಾತ ನಟಿ ತ್ರಿಷಾ ಸೇರಿದಂತೆ ಹಲವು ಮನೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದಾರೆ. ಚೆನ್ನೈ ಪೊಲೀಸರು ತ್ರಿಷಾ ಹಾಗೂ ಇನ್ನೂ ಕೆಲವು ಸೆಲೆಬ್ರಿಟಿಗಳು, ರಾಜಕಾರಣಿಗಳ ಮನೆಗಳಿಗೆ ಶ್ವಾನದಳದೊಟ್ಟಿಗೆ ತೆರಳಿ ತನಿಖೆ ನಡೆಸಿದ್ದು, ಬಾಂಬ್ ಕರೆಗಳು ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ನಟ ವಿಜಯ್ ಅಭಿಮಾನಿಗಳ ಕೃತ್ಯ?
ನಟ ವಿಜಯ್ ಅವರ ಅಭಿಮಾನಿಗಳದ್ದೇ ಈ ಕೆಲಸ ಆಗಿರಬಹುದು ಎಂಬ ಅನುಮಾವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ 41 ಮಂದಿ ಮೃತರಾಗಿದ್ದು, ಪ್ರಕರಣದ ಬಗ್ಗೆ ಸಿಎಂ ಸ್ಟಾಲಿನ್ ಅವರು ಗಂಭೀರವಾದ ಆದೇಶಗಳನ್ನು ಪೊಲೀಸರಿಗೆ ನೀಡಿದ್ದಾರೆ. ವಿಜಯ್ ಪಕ್ಷದ ಕೆಲ ಮುಖಂಡರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನು ನಟಿ ತ್ರಿಷಾ, ಮೃತರ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದು ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
ನಟ, ರಾಜಕಾರಣಿ ಎಸ್ವಿ ಶೇಖರ್ ಸಹ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ವಿಜಯ್ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಇನ್ನು ವಿಜಯ್ ಅವರಿಗೆ ಬಿಜೆಪಿ ರಾಜಕೀಯ ವಿರೋಧಿ, ಹಾಗಾಗಿ ಇವರುಗಳನ್ನೇ ಟಾರ್ಗೆಟ್ ಮಾಡಿ ಬಾಂಬ್ ಇರಿಸಿರುವುದು ಸುಳ್ಳು ಕರೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಚೆನ್ನೈ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಸುಳ್ಳು ಕರೆ ಮಾಡಿದವರ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.