ಮೈಸೂರು : ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ. ಗೃಹಪ್ರವೇಶ ಒಂದು ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸುವುದಿಲ್ಲ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಹೊಸಮನೆ ಕೆಲಸ ಬಹುತೇಕ ಮುಕ್ತಾಯವಾಗಿದೆ. ಈಗಿರುವ ಮನೆ ನನ್ನದಲ್ಲ ಮರಿಸ್ವಾಮಿ ಅವರದು. ಮರಿಸ್ವಾಮಿ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತರಾಗಿದ್ದಾರೆ. ನನಗೆ ನನ್ನ ಮಗ ಮತ್ತು ಸ್ನೇಹಿತರಿಗೆ ಊಟ ಹಾಕುವುದು ಮರಿಸ್ವಾಮಿ. ಗೃಹಪ್ರವೇಶ ಮಾಡಿದ ಬಳಿಕ ಹೊಸ ಮನೆಗೆ ಹೋಗುತ್ತೇನೆ. ಜನರನ್ನು ಭೇಟಿ ಮಾಡಲು ಈ ಮನೆ ಬೆಳಸಿಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.