ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, 11 ವರ್ಷದ ಪುತ್ರಿಯನ್ನು ಮಚ್ಚಿನಿಂದ ಕೊಚ್ಚಿ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ ಬಳಿ ಘಟನೆ ನಡೆದಿದೆ. ಶರಾವತಿ ನಗರದಲ್ಲಿರುವ ಮೆಗ್ಗಾನ್ ಜಿಲ್ಪಾಸ್ಪತ್ರೆ ಕ್ವಾಟರ್ಸ್ ನಲ್ಲಿ 11 ವರ್ಷದ ಪುತ್ರಿ ಪೂರ್ವಿಕಾಳನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಬಳಿಕ ಶ್ರುತಿ (36) ನೇಣಿಗೆ ಶರಣಾಗಿದ್ದಾರೆ.
ಪತಿ ರಾಮಣ್ಣ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಚ್ಚಿನಿಂದ ಪೂರ್ವಿಕಾಳನ್ನು ಹತ್ಯೆ ಮಾಡಿ ಶ್ರುತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.