ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಸೈಕೋ ಪಾತ್ ಪತಿರಾಯ ಒಬ್ಬ ಬೆಡ್ ರೂಮ್ನಲ್ಲಿ ಸೀಕ್ರೆಟ್ ಕ್ಯಾಮರಾ ಫಿಕ್ಸ್ ಮಾಡಿದ್ದಾನೆ. ಅಲ್ಲದೇ ಪತ್ನಿ ಜೊತೆಗೆ ಲೈಂಗಿಕ ಕ್ರಿಯೆ ರೆಕಾರ್ಡ್ ಮಾಡಿದ ಈ ಪಾಪಿ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಸಯ್ಯದ್ ಇನಾಮುಲ್ ಹಕ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.
ಖಾಸಗಿ ವಿಡಿಯೋ ಇಟ್ಟುಕೊಂಡು ಪತ್ನಿಗೆ ಸಯ್ಯದ್ ಬ್ಲಾಕ್ ಮೇಲ್ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಮಲಗುವಂತೆ ಆತ ಒತ್ತಾಯ ಮಾಡುತ್ತಿದ್ದ ಅಲ್ಲದೆ ಪತ್ನಿಯ ಖಾಸಗಿ ವಿಡಿಯೋವನ್ನು ತನ್ನ ಸ್ನೇಹಿತರಿಗೂ ಕೂಡ ಹಂಚಿದ ಆರೋಪ ಕೇಳಿ ಬಂದಿದೆ. ದುಬೈನಲ್ಲಿರುವ ತನ್ನ ಸ್ನೇಹಿತರಿಗೆ ಫೋಟೋ ಮತ್ತು ವಿಡಿಯೋಗಳನ್ನು ಈತ ಶೇರ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೈಯದ್ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಈ ಮದುವೆ ಮೊದಲೇ ಈಗಾಗಲೇ ಆತನಿಗೆ ಮದುವೆ ಆಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಮೊದಲನೇ ಮದುವೆ ಆಗಿದ್ದು ತಿಳಿಸದೆ ಎರಡನೇ ಮದುವೆ ಆಗಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಆರೋಪಿ ಸಂಬಂಧಿ ಇಂದಲು ಲೈಂಗಿಕ ಕ್ರಿಯೆಗೆ ಒತ್ತಾಯ ಕೇಳಿ ಬಂದಿದೆ. ಸಂಬಂಧಿ ವಸೀಮ್ ಬೋಕಾರಿ ವಿರುದ್ಧ ಮಹಿಳೆ ಗಂಭೀರವಾಗಿ ಆರೋಪಿಸಿದ್ದು ಸತ್ರಸ್ತೆ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿಲಾಗಿದೆ.a