ಚಿಕ್ಕಮಗಳೂರು : ಧರ್ಮ-ಅಧರ್ಮ ಸಂಕಷ್ಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಎಲ್ಲರೂ ಎಚ್ಚರದಿಂದರಬೇಕು ಎಂದು ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಾರ್ಣಿಕ ನುಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಕಾರ್ಣಿಕ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಳೆದ 15 ವರ್ಷಗಳಿಂದ ದಶರಥ ಪೂಜಾರಿ ಕಾರ್ಣಿಕ ನುಡಿಯುತ್ತಿದ್ದಾರೆ.
ಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು.ಸರ್ವರು ಎಚ್ಚರದಿಂದರಬೇಕು ಪರಾಕ್ ಎಂದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಾರ್ಣಿಕ ನುಡಿದಿದ್ದಾರೆ.