ಚಾಮರಾಜನಗರ : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ನೋಡಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ದಸರಾ ನೋಡಲು ತೆರಳಿದ್ದ ವೇಳೆ ಉದ್ಯಮಿಯೊಬ್ಬರ ಮನೆ ಕಳ್ಳತನ ಆಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ದಸರಾ ಲೈಟಿಂಗ್ಸ್ ನೋಡಲು ಮೈಸೂರಿಗೆ ಕುಟುಂಬಸ್ ಹೋಗಿದ್ದರು. ಉಮೇಶ್ ಅವರು ಹೆಂಡತಿ ಸವಿತಾ ಮತ್ತು ಇಬ್ಬರು ಮಕ್ಕಳು ಮೈಸೂರು ದಸರಾ ಲೈಟಿಂಗ್ ನೋಡಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 29 ಲಕ್ಷ ರೂ. ನಗದು ಮತ್ತು ಚಿನ್ನದ ತಾಳಿಸರ, ನೆಕ್ಷೇಸ್, ಬಳೆಗಳು, ಸಣ್ಣ ಚೈನ್ ಗಳು, ಓಲೆಗಳು, ಮುತ್ತಿನ ಸರ ಸೇರಿದಂತೆ ಒಟ್ಟು 300 ಗ್ರಾಂ ಚಿನ್ನಾಭರಣ (12 ಲಕ್ಷ ಮೌಲ್ಯ) ಹಾಗೂ 2 ಕೆ.ಜಿ ಬೆಳ್ಳಿ ನಾಣ್ಯ, 2 ರೇಷ್ಮೆ ಸೀರೆ ಮತ್ತು 2 ದುಬಾರಿ ವಾಚ್ ಸೇರಿದಂತೆ ಒಟ್ಟು 42.70 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.